ರಾಮನಗರ: ‘ಆಧುನಿಕತೆಯ ಭರಾಟೆಯಲ್ಲಿ ಸದಭಿರುಚಿಯ ಹವ್ಯಾಸಗಳು ಸೊರಗುತ್ತಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಹ್ಲಾದ್ಗೌಡ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಅವ್ವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲ್ಲೂಕು ಗಮಕ ಕಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕನ್ನಡದ ಶ್ರೇಷ್ಠ ಕೃತಿಗಳ ವಾಚನ, ವ್ಯಾಖ್ಯಾನವನ್ನು ಆಲಿಸುವವರ ಸಂಖ್ಯೆ ಹೆಚ್ಚಾಗಬೇಕು.

ಪಠ್ಯಕ್ರಮಗಳಲ್ಲಿ ಇರುವ ಹಳಗನ್ನಡದ ಷಟ್ಪದಿಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಶಿಕ್ಷಕರು ಬೋಧಿಸಬೇಕು’ ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿ.ಎಸ್. ನಾರಾಯಣ ಮಾತನಾಡಿ, ‘ಗಮಕ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸಬೇಕಾಗಿದೆ. ಪುರಾತನ ಕಲೆಯಾದ ಗಮಕ ಸಾಹಿತ್ಯ ಇಂದಿನ ಜನಾಂಗಕ್ಕೆ ಅಗತ್ಯವಿದೆ. ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಗಮಕಿಗಳು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಗಮಕ ಕಲಾ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್. ಸುಮಂಗಳಾ ಮಾತನಾಡಿ, ‘ಹೆಚ್ಚು ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ಕಲೆಗಳಲ್ಲಿ ಗಮಕವೂ ಒಂದಾಗಿದೆ. ಭವಿಷ್ಯದ ಪ್ರಜೆಗಳಾಗುವ ವಿದ್ಯಾರ್ಥಿಗಳು ಕೇವಲ ಮನರಂಜನೆಗೆ ಆದ್ಯತೆ ನೀಡದೆ ಜ್ಞಾನಾಭಿವೃದ್ಧಿಯ ಕಡೆಗೂ ಗಮನ ನೀಡಬೇಕು’ ಎಂದು ಅವರು ತಿಳಿಸಿದರು.

ಸಾಹಿತಿ ಇಂದಿರಾ ಶರಣ್ ಮಾತನಾಡಿ, ‘ಪ್ರಾಚೀನ ಕಾವ್ಯವನ್ನು ಲಯಬದ್ಧವಾಗಿ ಓದುವ ಕಲೆಯೆ ಗಮಕ ಕಲೆಯಾಗಿದೆ. ಪುರಾಣಗಳನ್ನು ವಾಚನ ಮಾಡುವುದು ಮಾನವೀಯತೆಯ ಪ್ರತಿಬಿಂಬವಾಗಿದೆ. ಹಿಂದೆ ಕೇವಲ ಪಂಡಿತರಿಗೆ ಮೀಸಲಾಗಿದ್ದ ಧಾರ್ಮಿಕ ಪಠ್ಯದ ಗಮಕ ವಾಚನಗಳು ಇಂದು ಎಲ್ಲರ ಕೈಗೆಟುಕುತ್ತಿವೆ’ ಎಂದು ತಿಳಿಸಿದರು.

ಕನ್ನಡ ಕಾವ್ಯ ವೈಭವದಲ್ಲಿ ಪಂಪ, ರನ್ನ, ಷಡಕ್ಷರದೇವ, ಕುಮಾರವ್ಯಾಸ, ರಾಘವಾಂಕ, ರತ್ನಾಕರವರ್ಣಿ, ಕುಮಾರ ವಾಲ್ಮೀಕಿ ಅವರು ರಚಿಸಿರುವ ಕಾವ್ಯ ಭಾಗಗಳ ವ್ಯಾಖ್ಯಾನವನ್ನು ತೆಕ್ಕೆರೆ ಸುಬ್ರಹ್ಮಣ್ಯಭಟ್ಟ, ಜಿ.ಎಸ್. ನಾರಾಯಣ, ರೇಣುಕಾ ರಾಮರಾವ್, ರತ್ನಮೂರ್ತಿ, ಹುಲಿಗೆರೆ ಸೋಮನಾಥ ಕವಿಯ ಸೋಮೇಶ್ವರ ಶತಕ, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗಗಳ ಭಾಗವನ್ನು ಹಾಗೂ ಗಮಕ ಕಲಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ವ್ಯಾಖ್ಯಾನಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಶಿವಲಿಂಗಪ್ಪ, ಮುಖ್ಯ ಶಿಕ್ಷಕಿ ಜಿ.ಎಸ್. ಸವಿತಾ ಕುಮಾರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹಾಲಿಂಗಯ್ಯ, ಉರ್ದು ಸರ್ಕಾರಿ ಪ್ರೌಢ_ಶಾಲೆಯ ಮುಖ್ಯಶಿಕ್ಷಕ ಸಿದ್ದರಾಜು, ಗುತ್ತಿಗೆದಾರ ಕೆ.ತಮ್ಮಣ್ಣ, ವೇಣುಗೋಪಾಲ್, ಎಸ್ಡಿಎಂಸಿ ಅಧ್ಯಕ್ಷ ರೇಣುಕಪ್ಪ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳಾದ ನಾಗಮಣಿ, ಕೆ. ಶಿವಹೊಂಬಯ್ಯ, ಎಚ್.ಕೆ. ಶೈಲಾ, ಮಂಜುಳಾ ಪ್ರಕಾಶ್, ಶಶಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.