ಶಿವಮೊಗ್ಗ: ಇಲ್ಲಿನ ವಿನೋಬನಗರದ ಉಪಾಹಾರ ದರ್ಶಿನಿಯಲ್ಲಿರೋಬೊಟ್ ಸಪ್ಲಯರ್ ಇದೀಗ ಗ್ರಾಹಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಹೋಟೆಲ್ ಮಾಲೀಕರು ರೋಬೊಟ್ ಸಪ್ಲಯರ್ ಮೂಲಕ ಗ್ರಾಹಕರಿಗೆ ತಿಂಡಿ ತಿನಿಸು ಪೂರೈಸುತ್ತಿದ್ದಾರೆ. ಗ್ರಾಹಕರು ಸಹಜವಾಗಿ ಈ ಹೋಟೆಲ್‌ನತ್ತ ಧಾವಿಸುತ್ತಿದ್ದಾರೆ.ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೀರು, ತಿನಿಸುಗಳನ್ನು ಟೇಬಲ್ ಬಳಿ ತಂದು ಕೊಟ್ಟು ನಂತರ ಧನ್ಯವಾದ ಹೇಳುತ್ತಿದೆ.
2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸುಮಾರು 3 ದಿನಗಳ ಕಾಲ ಸೇವೆ ನೀಡುತ್ತದೆ. ಚೀನಾ ನಿರ್ಮಿತ ರೋಬೊಟ್ ಇದಾಗಿದ್ದು, ಹೋಟೆಲ್ ಮಾಲೀಕರು ಆಂಧ್ರ ಪ್ರದೇಶದ ವಿಜಯವಾಡದ ಸ್ನೇಹಿತರ ಮೂಲಕ ತರಿಸಿಕೊಂಡಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.