ಸೋಮವಾರ, ಏಪ್ರಿಲ್ 6, 2020
19 °C

ಮದ್ಯಪಾನ ನಿಷೇಧಕ್ಕೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕುಡಿತದಿಂದ ಆರ್ಥಿಕ ನಷ್ಟದ ಜತೆಗೆ, ಸಾಮಾಜಿಕ ಸಂಕಷ್ಟಗಳೂ ಎದುರಾಗುತ್ತವೆ. ಮದ್ಯಪಾನ ಮುಕ್ತ ಸಮಾಜವೇ ಇದಕ್ಕೆಲ್ಲ ಪರಿಹಾರ ಎಂದು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿಜಯಾ ಶ್ರೀಧರ್‌ ಪ್ರತಿಪಾದಿಸಿದರು.

ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಾಲ್ಕನೇ ಗೋಷ್ಠಿಯಲ್ಲಿ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಮದ್ಯಪಾನ ನಿಷೇಧಿಸಬೇಕು. ಮದ್ಯಪಾನ ಮುಕ್ತ ಸಮಾಜ ನಿರ್ಮಾಣವಾದರೆ ಅತ್ಯಾಚಾರ, ಶೋಷಣೆ, ಕಳವು, ಕೊಲೆ ಪ್ರಕರಣಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ಕಿವಿಮಾತು ಹೇಳಿದರು.

ಲೇಖಕಿ ಶೀಲಾ ಸುರೇಶ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ವಿಜಯಾ ಶ್ರೀಧರ್ ಅವರು, ಮಹಿಳೆ ಅತ್ಯಂತ ಹೆಚ್ಚಿನ ಶೋಷಣೆಗೆ ಒಳಗಾಗುತ್ತಿದ್ದಾಳೆ. ತಮ್ಮ ಕುಟುಂಬದಲ್ಲೇ ಬಂಧಿಯಾಗಿದ್ದಾಳೆ. ಎಷ್ಟೋ ಮಹಿಳೆಯರು ಕುಡುಕ ಗಂಡನನ್ನು ಕಟ್ಟಿಕೊಂಡು ಕನಸುಗಳನ್ನೇ ಮರೆತ್ತಿದ್ದಾರೆ. ಮಹಿಳೆಯ ದುಡಿಮೆಯಲ್ಲಿ ಕುಡಿಯುವ ಗಂಡಸರೇ ಹೆಚ್ಚಾಗಿದ್ದಾರೆ ಎಂದು ದೂರಿದರು. 

ಸಂವಾದದಲ್ಲಿ ಬಿ.ಟಿ.ಅಂಬಿಕಾ, ಪ್ರೊ.ಕಿರಣ್ ದೇಸಾಯಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಜಗದೀಶ್ ಕಾಗಿನೆಲೆ ಉಪಸ್ಥಿತರಿದ್ದರು.  ಸುಮಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು