ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಶಫಿಗೆ ಜಾಮೀನು

Last Updated 3 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಶಿವಮೊಗ್ಗ: ತಪ್ಪು ಮಾಹಿತಿ ನೀಡಿ ನಕಲಿ ಪಾಸ್‌ಪೋರ್ಟ್‌ ಪಡೆದ ಆರೋಪದ ಮೇಲೆ ಬಂಧಿತರಾಗಿದ್ದ ತೀರ್ಥಹಳ್ಳಿಯ ಶಫಿ ಅಹಮದ್‌ (55) ಅವರಿಗೆ ಅಲ್ಲಿನ ಜೆಎಂಎಫ್‌ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ತೀರ್ಥಹಳ್ಳಿಯ ವಿಳಾಸ ಹೊಂದಿದ್ದರೂ ತಾಯಿ, ತಂದೆಯ ಹೆಸರುಬದಲಿಸಿ ಗೋವಾ ಪಾಸ್‌ಪೋರ್ಟ್‌ ಸೇವಾ ಕೇಂದ್ರದಿಂದ ಪಾಸ್‌ಪೋರ್ಟ್‌ ಪಡೆದಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ರಿಯಾದ್‌ನಿಂದ ತೀರ್ಥಹಳ್ಳಿಗೆ ಬಂದಿರುವ ಮಾಹಿತಿ ಪಡೆದುಅವರನ್ನು ಬಂಧಿಸಿದ್ದರು.

ಭಾರತದಲ್ಲಿ ನಿಷೇಧಿಸಿರುವ ಸ್ಯಾಟ್‌ಲೈಟ್‌ ಫೋನ್ ಅನ್ನು ತೀರ್ಥಹಳ್ಳಿ ತಾಲ್ಲೂಕಿನ ಸಂಕದ ಹೊಳೆ, ಸುರಾನಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಳಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌.ಐ.ಎ) ನೀಡಿದ ಮಾಹಿತಿ ಆಧಾರದ ಮೇಲೆ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್‌) ತಿಂಗಳ ಹಿಂದೆ ಆ ಪ್ರದೇಶಗಳಲ್ಲಿ ತಪಾಸಣೆ ನಡೆಸಿತ್ತು. ಆಗ ಅಲ್ಲಿನ ನಿವಾಸಿಯೊಬ್ಬರು ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದಿರುವ ಮಾಹಿತಿ ದೊರಕಿತ್ತು.

ದೇಶ ಬಿಟ್ಟು ತೆರಳಬಾರದು. ಅಧಿಕಾರಿಗಳ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇಲೆ ನ್ಯಾಯಾಲಯ ಜಾಮೀನು ಅರ್ಜಿ ಪುರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT