ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಶಾಲಾ ಕಟ್ಟಡಗಳು; ಮಕ್ಕಳ ಸುರಕ್ಷತೆಯ ಅಳಲುಗಳು...

Last Updated 23 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ಸರ್ಕಾರಿ ಪ್ರಾಥಮಿಕ ಮತ್ತು ಪೌಢಶಾಲೆಗಳ ಕಟ್ಟಡಗಳು ಹಲವು ದಶಕಗಳಷ್ಟು ಹಳೆಯವು. ಶಿಥಿಲಗೊಂಡು ತೀರ ದುಸ್ಥಿತಿಯಲ್ಲಿರುವ 87 ಕಟ್ಟಡಗಳ ಜೀರ್ಣೋದ್ಧಾರಕ್ಕೆ ಕೊನೆಗೂ ಸರ್ಕಾರ ₹ 15 ಕೋಟಿ ಬಿಡುಗಡೆ ಮಾಡಿದೆ.

ದುರಸ್ತಿ ಕಾಮಗಾರಿಗಳೂ ಶೀಘ್ರ ಆರಂಭವಾಗುವ ಭರವಸೆ ಸಿಕ್ಕಿದೆ. ದುರ್ಗಿಗುಡಿ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದ್ದಾರೆ. ಖಾಸಗಿ ಶಾಲೆಗಳ ಭರಾಟೆಮಧ್ಯೆ ಇಂತಹ ಸರ್ಕಾರಿ ಶಾಲೆಗಳಲ್ಲಿ ಬಡವರು, ನಿರ್ಗತಿಕ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಈ ಮಕ್ಕಳ ಸುರಕ್ಷತೆ ದೃಷ್ಟಿಯಿಂದಕಟ್ಟಡ ಕಾಮಗಾರಿಗಳ ಗುಣಮಟ್ಟ ಅತಿ ಮುಖ್ಯ. ಈ ಕಾಮಗಾರಿಗಳು ಪಾಲಿಕೆಯ ರಸ್ತೆ, ಚರಂಡಿ ಕಾಮಗಾರಿಗಳಂತೆ ಕಳಪೆಯಾಗಬಾರದು ಎನ್ನುವ ಒಕ್ಕೊರಲ ಅಭಿಪ್ರಾಯ ಹೊರಹಾಕಿದ್ದಾರೆನಗರದ ನಾಗರಿಕರು.

ಸರ್ಕಾರ ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳ ದುರಸ್ತಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಅನುದಾನ ನೀಡಿದೆ.ನಗರ ಪಾಲಿಕೆಯ 87 ಶಾಲೆಗಳೂ ಸೇರಿ ಜಿಲ್ಲೆಯಲ್ಲಿ538 ಪ್ರಾಥಮಿಕ, ಪ್ರೌಢಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದವು.ಅವುಗಳ ದುರಸ್ತಿಗೆ ₹ 56.76 ಕೋಟಿ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈಗ ನಗರದ ಶಾಲೆಗಳಿಗೆ ₹ 15 ಕೋಟಿ ಸಿಕ್ಕಿದೆ.ಮೊದಲ ಹಂತದಲ್ಲಿ ₹ 9.55 ಕೋಟಿ ವೆಚ್ಚದಲ್ಲಿ 74 ಶಾಲೆಗಳ ದುರಸ್ತಿಗೆ ಟೆಂಡರ್ ನೀಡಲಾಗಿದೆ. ಎರಡನೇ ಹಂತದಲ್ಲಿ ₹ 1.69 ಕೋಟಿ ವೆಚ್ಚದಲ್ಲಿ 19 ಶಾಲೆಗಳ ದುರಸ್ತಿ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಒಟ್ಟು 21 ಪ್ಯಾಕೇಜ್‌ಗಳ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ.ಶಿವಮೊಗ್ಗ ನಗರದಲ್ಲಿಶಾಲಾ ಕಟ್ಟಡಗಳ ಜತೆಗೆ, ₹ 1.79 ಕೋಟಿ ವೆಚ್ಚದಲ್ಲಿ 47 ಶೌಚಾಲಯ ನಿರ್ಮಿಸಲಾಗುತ್ತಿದೆ.

ವಾದಿಯ ಹುದಾ ನಗರ ಸೇರಿದಂತೆ ಕೆಲವು ಶಾಲೆಗಳ ಕಟ್ಟಡ ಇರುವ ನಿವೇಶನಗಳು ವಿವಾದದಲ್ಲಿವೆ. ಅಂತಹ ಕಟ್ಟಡಗಳ ದುರಸ್ತಿಗೆ ಅನುದಾನ ನೀಡಿಲ್ಲ. ಹಾಗಾಗಿ, ಆ ಶಾಲೆಗಳ ಮಕ್ಕಳು ಶಿಥಿಲಾವಸ್ಥೆಯ ಕಟ್ಟಡದಲ್ಲೇ ಪಾಠ ಕೇಳುವ ಸ್ಥಿತಿಮುಂದುವರಿಯಲಿದೆ.

ಚಾವಣಿ, ಕಿಟಕಿ, ಬಾಗಿಲುಗಳೂ ಇಲ್ಲ: ಹಲವು ಸರ್ಕಾರಿ ಶಾಲೆಗಳಲ್ಲಿ ಛಾವಣಿ ಹಾರಿಹೋಗಿವೆ. ಕಿಟಕಿಗಳು ಇಲ್ಲವಾಗಿವೆ. ಕೆಲವುಶಾಲೆಗಳಲ್ಲಿ ಬಾಗಿಲುಗಳೂ ಭದ್ರವಾಗಿಲ್ಲ. ಜನವಸತಿ, ಮಾರುಕಟ್ಟೆಗಳ ಮಧ್ಯೆ ಇರುವ ಶಾಲೆಗಳ ಮೈದಾನಗಳು ಮೋಜು, ಮಸ್ತಿಯ ತಾಣಗಳಾಗಿವೆ. ರಾತ್ರಿಯಾದರೆ ಕುಡಿದು ಬಾಟಲಿಗಳನ್ನು ಎಲ್ಲೆಡೆಬಿಸಾಕಿರುತ್ತಾರೆ. ಕೆಲವು ಶಾಲೆಗಳ ಮೈದಾನದಲ್ಲಿ ಮಾಂಸವನ್ನುಬೇಯಿಸುತ್ತಾರೆ. ಅಲ್ಲೇ ಊಟ ಮಾಡಿ, ಗಲೀಜು ಮಾಡಿ ಹೋಗುತ್ತಾರೆ. ಸಾಕಷ್ಟು ಶಾಲೆಗಳ ಮೈದಾನಗಳು ಮೂತ್ರ ವಿಸರ್ಜನೆಯ ತಾಣಗಳಾಗಿವೆ. ಮಳೆ ಬಂದರೆ ಕೊಠಡಿಗಳ ಒಳಗೆ ನೀರು ಬರುತ್ತದೆ. ಈಚೆಗೆ ಸುರಿದ ಮಳೆಗೆ 50ಕ್ಕೂ ಹೆಚ್ಚು
ಶಾಲೆಗಳ ಬಾಗಿಲು ವಾರದವರೆಗೆ ಮುಚ್ಚಲಾಗಿತ್ತು. ಕೆಲವು ಶಾಲೆಗಳನ್ನು ಸ್ಥಳಾಂತರಿಸಲಾಗಿತ್ತು.

ಕೆಲವು ಶಾಲೆಗಳಲ್ಲಿಗಿಜಿಗುಡುವ ಜನ ಜಂಗುಳಿ ಮಧ್ಯೆ ಮಕ್ಕಳ ಹಾಡು, ಆಟ, ಪಾಠ ಕಮರಿ ಹೋಗಿವೆ. ಶಾಲೆಯ ಗೇಟ್ ಬಳಿ ವಾಹನಗಳನ್ನು ನಿಲ್ಲಿಸುವ ಪರಿಣಾಮ ಮಕ್ಕಳು ಶಾಲೆ ಪ್ರವೇಶಿಸಲೂ ಪರದಾಡಬೇಕಿದೆ. ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಹೆಂಚುಗಳು ಮುರಿದು ಬಿದ್ದಿವೆ. ಸೂರ್ಯನ ಕಿರಣಗಳು ನೇರವಾಗಿ ಶಾಲೆ ಒಳಗೆ ಪ್ರವೇಶಿಸುತ್ತವೆ. ಕೊಠಡಿಗಳು ಪಾಳು ಬಿದ್ದಿವೆ. ಶೌಚಾಲಯ ಇದ್ದರೂ ಇಲ್ಲದಂತಿವೆ.ಒಂದು ಕಾಲದಲ್ಲಿ ನೂರಾರು ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕ್ಷೀಣಿಸಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ರ ಒಳಗಿದೆ. ಬಹಳಷ್ಟು ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ.

‘ಶಾಲೆಗಳ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ನಿಗಾವಹಿಸಬೇಕು. ಕಳಪೆ ಕಂಡುಬಂದರೆ ತಕ್ಷಣ ಗಮನಕ್ಕೆ ತರಬೇಕು. ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲ’ ಎನ್ನುತ್ತಾರೆ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ತರಲು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ.

ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಕಾಪಾಡಬೇಕು. ಶೌಚಾಲಯಗಳ ನಿರ್ವಹಣೆಗೆ ಆಯಾಶಾಲಾಭಿವೃದ್ಧಿ ಸಮಿತಿಗಳು ಸೂಕ್ತ ವ್ಯವಸ್ಥೆಮಾಡಿಕೊಳ್ಳಬೇಕು. ಈ ಶಾಲೆಗಳು ರಾಜ್ಯಕ್ಕೆ ಮಾದರಿಯಾಗಬೇಕು ಎನ್ನುವುದು ಸಚಿವರ ಆಶಯ.

ಶಿಥಿಲಗೊಂಡ ಶಾಲೆಗಳು: ಬಿ.ಎಚ್.ರಸ್ತೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ, ಬಾಲಿಕಾ ಪ್ರೌಢಶಾಲೆ, ತಮಿಳು ಶಾಲೆ, ಉರ್ದು ಶಾಲೆ, ಗಾಡಿಕೊಪ್ಪ, ಆಲ್ಕೊಳ, ಮಲ್ಲಿಗೇನಹಳ್ಳಿ, ಗುತ್ಯಪ್ಪ ಕಾಲೊನಿ, ಗಾಡಿಕೊಪ್ಪ ಕ್ಯಾಂಪ್, ಜೋಸೆಫ್‌ ನಗರ, ರವೀಂದ್ರ ನಗರ, ಬೊಮ್ಮನಕಟ್ಟೆ, ವೆಂಕಟೇಶ ನಗರ, ಕಾಶಿಪುರ, ಶಾಂತಿನಗರ, ನವುಲೆ, ತೇವರ ಚಟ್ನಹಳ್ಳಿ, ಶೇಷಾದ್ರಿಪುರಂ, ಸೋಮಿನಕೊಪ್ಪ, ಸವಾರ್‌ಲೈನ್ ರಸ್ತೆ, ಮಲವಗೊಪ್ಪ, ಮದಾರಿಪಾಳ್ಯ, ಊರುಗಡೂರು, ಗೌಸಿಯಾನಗರ, ಚಿಲಕಾದ್ರಿಹಳ್ಳಿ, ಸೂಳೆಬೈಲು, ಒಡ್ಡಿನಕೊಪ್ಪ, ಮಿಳಘಟ್ಟ, ಮಾರ್ನವಮಿ ಬೈಲ್, ಸ್ಕ್ಯಾವೆಂಜರ್ಸ್ ಕಾಲೊನಿ, ಮಂಜುನಾಥ ಬಡಾವಣೆ, ಟಿಪ್ಪುನಗರ, ನ್ಯೂಮಂಡ್ಲಿ, ಹರಕೆರೆ, ಚಿಕ್ಕಲ್, ಇಸ್ಲಾಂಪುರ, ಗುರುಪುರ, ಅಶೋಕನಗರ, ಸಿದ್ದೇಶ್ವರ ನಗರ, ವಿದ್ಯಾನಗರ, ಮಂಜುನಾಥ ಬಡಾವಣೆ, ಪುರಲೆ, ಟಿಪ್ಪುನಗರ, ಗೋಪಿಶೆಟ್ಟಿಕೊಪ್ಪ, ಹಳೇ ಮಂಡ್ಲಿ, ತುಂಗಾನಗರ, ಗೋಪಾಳ, ಕೆ.ಎಚ್.ಬಿ. ಕಾಲೊನಿ, ಇಸ್ಲಾಪುರ, ಹೊಸಮನೆ, ದುರ್ಗಿಗುಡಿ, ಟ್ಯಾಂಕ್‌ಮೊಹಲ್ಲಾ, ಅಮೀರ್ ಅಹಮದ್ ಕಾಲೊನಿ, ಬಿಪಿಒ ಏರಿಯಾ, ಲಷ್ಕರ್‌ ಮೊಹಲ್ಲಾ, ಕೆ.ಆರ್.ಪುರಂ, ಸೀಗೆಹಟ್ಟಿ, ಎನ್‌.ಟಿ.ರಸ್ತೆ, ಕ್ಲಾರ್ಕ್ ಪೇಟೆ, ದೊಡ್ಡಪೇಟೆ, ಪೆಟ್ಟಾ, ಕಾಮಾಕ್ಷಿ ಬೀದಿ ಶಾಲೆಗಳು.

87ದುರಸ್ತಿ ಭಾಗ್ಯ ಕಾಣುತ್ತಿರುವ ಸರ್ಕಾರಿ ಶಾಲೆಗಳು

₹ 15 ಕೋಟಿಶಾಲೆಗಳ ದುರಸ್ತಿಗೆ ದೊರೆತಅನುದಾನ

74ಮೊದಲ ಹಂತದಲ್ಲಿ ದುರಸ್ತಿ ಕಾಣುವ ಶಾಲೆಗಳು

₹ 9.55 ಕೋಟಿ74 ಶಾಲೆಗಳ ದುರಸ್ತಿಗೆ ನಿಗದಿಯಾದ ಹಣ

21ಕಾಮಗಾರಿಗೆ ರೂಪಿಸಿದ ಪ್ಯಾಕೇಜ್‌ಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT