ಭಾನುವಾರ, ಜನವರಿ 23, 2022
27 °C

ಶಿವಮೊಗ್ಗ: 251 ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ ದ್ವಿಶತಕ ದಾಟಿದ್ದು, 251 ಮಂದಿಗೆ ಕೋವಿಡ್‌ ಸೋಂಕು ಬಂದಿದೆ.

ಈ ಪೈಕಿ 141 ಮಂದಿ ಶಿವಮೊಗ್ಗ ತಾಲ್ಲೂಕಿಗೆ ಸೇರಿದ್ದಾರೆ. ಭದ್ರಾವತಿಯ 43, ತೀರ್ಥಹಳ್ಳಿಯ ಒಬ್ಬರು, ಶಿಕಾರಿಪುರದ 10, ಸಾಗರದ 19, ಹೊಸನಗರದ 23, ಸೊರಬದ 2 ಹಾಗೂ ಹೊರ ಜಿಲ್ಲೆಯಿಂದ ಬಂದ 12 ಮಂದಿಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 747ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 101 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಎಚ್‌ಸಿಯಲ್ಲಿ 82, ಹೋಮ್ ಐಸೊಲೇಷನ್‌ನಲ್ಲಿ 480, ಟ್ರಯೇಜ್‌ನಲ್ಲಿ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.