ಹೊಸನಗರ: ಜಗದ ಕತ್ತಲು ಮತ್ತು ಯುಗದ ಕತ್ತಲು ಕಳೆಯುವುದಕ್ಕಾಗಿಯೇ ಶ್ರೀರಾಮನ ಜನ್ಮವು ಈ ಪವಿತ್ರ ಭೂಮಿಯಲ್ಲಿ ಆಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದ ರಥೋತ್ಸವದ ವೇಳೆ ಅವರು ರಥಾರೋಹಣ ಮಾಡಿ ಸಂದೇಶ ನೀಡಿದರು.

ರಾಮ ಸ್ವತಃ ಧರ್ಮಯುಕ್ತ ಜೀವನ ನಡೆಸಿದ ಮಹಾಪುರುಷ. ಎಲ್ಲಾ ಯುಗಕ್ಕೂ ಎಲ್ಲಾ ಕಾಲಕ್ಕೂ ಅವನ ಜೀವನ ಮಾದರಿ ಮತ್ತು ಜಗತ್ತಿನ ಎಲ್ಲರಿಗೂ ಆದರ್ಶವಾಗಿದೆ. ರಾಮ ನಡೆದ ಧರ್ಮದ ಜೀವನವನ್ನು ನಡೆಸುವ ಸಂಕಲ್ಪಯೊಂದಿಗೆ ನಾವು ನಡೆದರೆ ಲಕ್ಷ್ಮೀ ಸ್ವರೂಪಳಾದ ಸೀತಾದೇವಿ ನೆಮ್ಮದಿಯ ಜೀವನವನ್ನು ಕರುಣಿಸುತ್ತಾಳೆ’ ಎಂದು ವಿವರಿಸಿದರು.

ಅಪಾರ ಭಕ್ತರು ತೇರು ಎಳೆದರು. ರಾಮೋತ್ಸವ ಸಮಿತಿ, ಮಹಾಮಂಡಲ, ಮಂಡಲ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ನಂತರ ಸೀತಾಕಲ್ಯಾಣೋತ್ಸವ ಜರುಗಿತು. ರಾಮನ ದಿಬ್ಬಣ ಎದುರುಗೊಳ್ಳುವ ವಿಶೇಷ ಸನ್ನಿವೇಶ ಆಕರ್ಷಣೀಯವಾಗಿತ್ತು. ಸಂಜೆ ರಾಮಲೀಲಾ ರಾವಣ ದಹನ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.