ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ ಕ್ಷೇತ್ರ: ಬದಲಾವಣೆ ಸನ್ನಿಹಿತ -ಅಮೃತ್ ರಾಸ್

Last Updated 18 ಮೇ 2022, 4:18 IST
ಅಕ್ಷರ ಗಾತ್ರ

ಹೊಸನಗರ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 36 ವರ್ಷಗಳಿಂದ ಒಂದೇ ಕೋಮಿನ ವ್ಯಕ್ತಿಗಳು ಶಾಸಕರಾಗುತ್ತಿರುವುದು ಕ್ಷೇತ್ರದ ದುರಂತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಆಗುವುದು ನಿಶ್ಚಿತ ಎಂದು ಆಮ್ ಆದ್ಮಿ ಪಾರ್ಟಿ ಸಂಚಾಲಕ ಅಮೃತ್ ರಾಸ್ ಹೇಳಿದರು.

ಹಿರಿಯ ವಕೀಲ ಕೆ.ದಿವಾಕರ ಅವರು ಆಮ್ ಆದ್ಮಿ ಪಾರ್ಟಿ ಸೇರ್ಡೆಡೆಗೊಂಡಿರುವುದರಿಂದ ಪಕ್ಷ ಸದೃಢಗೊಂಡಿದೆ. ಅವರು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬದಲಾವಣೆಯ ನಿರೀಕ್ಷೆಯಲ್ಲಿರುವ ಕ್ಷೇತ್ರದ ಜನರಿಗೆ ತಮ್ಮ ಹಕ್ಕು ಚಲಾವಣೆಗೆ ಸಕಾಲ ಸನ್ನಿಹಿತವಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆ.ದಿವಾಕರ್ ಅವರು ಹಿಂದೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದರು. ರಾಜ್ಯ ಕೈಗಾರಿಕಾ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವ ಅವರು ಪಕ್ಷಕ್ಕೆ ಸೇರ್ಡೆಡೆಗೊಂಡಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಗಣೇಶ್ ಸೋಗೋಡು ಮಾತನಾಡಿ, ‘ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಕೋಮುವಾದ ತಾಂಡವವಾಡುತ್ತಿದೆ. ಸ್ವಚ್ಛ ಹಾಗೂ ಬಂಡವಾಳಶಾಹಿಗಳಲ್ಲದ, ಸಾಮಾಜಿಕ ಹಿತಚಿಂತನೆಯುಳ್ಳ ಹಲವರು ಇಂದು ಪಕ್ಷಕ್ಕೆ ಸೇರ್ಡೆಡೆಗೊಳ್ಳುತ್ತಿದ್ದಾರೆ. ಪಕ್ಷ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಅಭಿವೃದ್ಧಿಪರ ಸರ್ಕಾರ ಬರಬೇಕು ಎನ್ನುವುದು ನಮ್ಮ ಆಶಯ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಸೆಬಾಸ್ಟಿನ್, ಹಸನಬ್ಬ, ಅರುಣ್ ಕೆರೆಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT