ಅಪಘಾತ: ತಂದೆ, ಮಕ್ಕಳ ಸಾವು
ಶಿರಾಳಕೊಪ್ಪ: ಪಟ್ಟಣದ ಹಿರೇಕೆರೂರು ರಸ್ತೆಯಲ್ಲಿ ಮಂಗಳವಾರ ರಾತ್ರಿ ಬೈಕ್ ಹಾಗೂ ಮಿನಿ ಲಾರಿ ನಡುವೆ ಡಿಕ್ಕಿಯಾಗಿ ತಂದೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಸ್ಥಿತಿ ಚಿಂತಾಜನಕವಾಗಿದೆ.
ಸೊರಬ ತಾಲ್ಲೂಕಿನ ಗುಂಜನೂರು ಗ್ರಾಮದ ರಾಮಚಂದ್ರ (40) ಮಕ್ಕಳಾದ ಶಶಾಂಕ್ (11) ಹಾಗೂ ಆದರ್ಶ(5) ಮೃತರು.
ಸೊರಬ ತಾಲ್ಲೂಕಿನ ಚಿಕ್ಕಜಂಬೂರಿನಲ್ಲಿ ವಿಶೇಷ ದೀಪಾವಳಿ ಹಬ್ಬಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ರಾಮಚಂದ್ರ ಅವರ ಪತ್ನಿ ಭಾಗ್ಯ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.