ಶಿವಮೊಗ್ಗ: ಇಲ್ಲಿನ ವೀರಣ್ಣ ಲೇಔಟ್ 3ನೇ ಕ್ರಾಸ್‌ನಲ್ಲಿರುವ ಲೈರಾ ಮೇಕ್ ಓವರ್ ಸ್ಟುಡಿಯೊ ಸಲೂನ್ ಮತ್ತು ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ಸೋಮವಾರ ಸಂಜೆ ವಿನೋಬ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಚಂದ್ರಕಲಾ ಮತ್ತು ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಭರತ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಪಾ ಮಾಲೀಕರಾದ ಮಿಳಘಟ್ಟದ ಸೌಮ್ಯ ಪ್ರಭು (33) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.