ಸಕಾಲಕ್ಕೆ ಸಿಗದ ಆಂಬುಲೆನ್ಸ್: ಮಣಕನಮಠದ ವ್ಯಕ್ತಿ ಸಾವು

ತುಮರಿ: ಆಂಬುಲೆನ್ಸ್ ಸಕಾಲಕ್ಕೆ ಸಿಗದಿರುವುದರಿಂದ ಬೇರಾಳ ಸಮೀಪದ ಮಣಕನಮಠದ ಡಾಕಪ್ಪ ಜೈನ್ (55) ಮೃತಪಟ್ಟಿದ್ದಾರೆ.
ಡಾಕಪ್ಪ ಜೈನ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸಿಗಲಿಲ್ಲ. ಹೊಸನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದ್ದ ಆಂಬುಲೆನ್ಸ್ 3 ಗಂಟೆ ತಡವಾಗಿ ಬಂತು. ಅಷ್ಟು ಹೊತ್ತಿಗೆ ಡಾಕಪ್ಪ ಜೈನ್ ನಿಧನರಾಗಿದ್ದರು.
ಇಲ್ಲಿನ ದ್ವೀಪದ ತುಮರಿ ಪ್ರಾಥಮಿಕ ಆರೋಗ್ಯ ಘಟಕಕ್ಕೆ ನೀಡಲಾಗಿದ್ದ ಆಂಬುಲೆನ್ಸ್‌ಗೆ ಎರಡು ದಿನಗಳ ಹಿಂದೆ ಚಾಲನೆ ನೀಡಲಾಗಿದ್ದು, ಸೋಮವಾರ ಅಪಘಾತವಾಗಿದ್ದರಿಂದ ರಿಪೇರಿ ಮಾಡಿಸಲೆಂದು ಅದನ್ನು ಕಳುಹಿಸಲಾಗಿತ್ತು.
ಧ್ವೀಪದ ತುಮರಿ ಬ್ಯಾಕೋಡಿನಲ್ಲಿ ಪುನಃ ಆಂಬುಲೆನ್ಸ್ ಸೇವೆಯಲ್ಲಿ ಅವ್ಯವಸ್ಥೆ ಉಂಟಾಗಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದ್ದಾರೆ.
ತುಮರಿ ಆರೋಗ್ಯ ಕೇಂದ್ರಕ್ಕೆ ಇದೀಗ ತಾತ್ಕಾಲಿಕವಾಗಿ ವೆಂಟಿಲೇಟರ್ ಇರುವ ಆಂಬುಲೆನ್ಸ್ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.