ಶನಿವಾರ, ನವೆಂಬರ್ 28, 2020
26 °C

ಗುತ್ತಿಗೆ ನೌಕರರಿಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ, ಗುತ್ತಿಗೆ ‘ಡಿ’ ಗ್ರೂಪ್ ನೌಕರರಿಗೆ ದೀಪಾವಳಿ ಹಬ್ಬದ ಅಂಗವಾಗಿ ಶಾಸಕ ಎಚ್. ಹಾಲಪ್ಪ ಹರತಾಳು ದಿನಸಿ ಕಿಟ್, ಆರ್ಥಿಕ ನೆರವು ನೀಡಿದರು.

‘ಗುತ್ತಿಗೆ ಆಧಾರಿತ ಹಾಗೂ ‘ಡಿ’ ಗ್ರೂಪ್ ನೌಕರರು ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸುವ ಸಲುವಾಗಿ ಅವರಿಗೆ ನೆರವು ನೀಡಲು ಆಸ್ಪತ್ರೆಯ ವೈದ್ಯ ಸಿಬ್ಬಂದಿ ಮುಂದಾಗಿರುವುದು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿ’ ಎಂದು ಶಾಸಕ ಹಾಲಪ್ಪ ಹೇಳಿದರು.

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ತಾಲ್ಲೂಕು ಅಧ್ಯಕ್ಷ ವೈ. ಮೋಹನ್, ಡಾ.ಪ್ರಕಾಶ್ ಬೋಸ್ಲೆ, ಡಾ. ನಾಗೇಂದ್ರಪ್ಪ, ಜಿ. ವೇಣುಗೋಪಾಲ್, ಡಾ. ನವೀನ್, ಡಾ. ಹರೀಶ್, ಡಾ. ಸುಮ, ಡಾ. ಪರಪ್ಪ, ಜುಬೇದಾ ಎಂ. ಅಲಿ, ರೇಣುಕಮ್ಮ, ರಾಜಶೇಖರ್ ಈಳಿಗೇರ್, ರವಿ ಆರ್.ಎನ್., ಶಾರದಮ್ಮ, ಗುರುಶಾಂತಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.