ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪಿಎಸ್ ಪಿಂಚಣಿ ಸೌಲಭ್ಯ: ಅರೆ ಸರ್ಕಾರಿ ನೌಕರರಿಗೂ ದಕ್ಕಲಿ

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯ
Published 16 ಜನವರಿ 2024, 14:16 IST
Last Updated 16 ಜನವರಿ 2024, 14:16 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸರ್ಕಾರಿ ನೌಕರರ ಬೇಡಿಕೆ ಹಳೆಯ ಪಿಂಚಣಿ (ಒಪಿಎಸ್) ವ್ಯವಸ್ಥೆಯನ್ನು ಅನುದಾನಿತ ಖಾಸಗಿ ಸಂಸ್ಥೆಗಳಲ್ಲಿರುವ ಅರೆ ಸರ್ಕಾರಿ, ಸಾಹಿತ್ಯ ಸಂಸ್ಥೆಗಳ ಹಿರಿಯ ನೌಕರರಿಗೂ ಸರ್ಕಾರ ಕಲ್ಪಿಸಿಕೊಡಬೇಕು’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ 11,500 ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸಲು ತೀರ್ಮಾನಿಸಿದೆ. ಆದರೆ, ಅರೆ ಸರ್ಕಾರಿ ನೌಕರರು 2005ಕ್ಕಿಂತ ಮುಂಚಿತವಾಗಿ ನೇಮಕಗೊಂಡಿದ್ದಾರೆ. ಇಲ್ಲಿ, 2006ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಮಾತ್ರ ಒಪಿಎಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಅರೆ ಸರ್ಕಾರಿ ನೌಕರರಿಗೂ ಅನ್ವಯ ಆಗಬೇಕು. ರಾಜ್ಯದಲ್ಲಿ ಅಂದಾಜು 5,000 ಸಾವಿರ ಅರೆ ಸರ್ಕಾರಿ ನೌಕರರು ಇರಬಹುದು. ಇವರಿಗೆ ಸರ್ಕಾರವೇ ವೇತನ ಪಾವತಿಸುತ್ತಿದೆ. ಆದ್ದರಿಂದ ಇವರಿಗೂ ಒಪಿಎಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಿಂದೆ ಅರೆ ಸರ್ಕಾರಿ ನೌಕರರ ಪರವಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇತ್ತೀಚೆಗೆ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಕೂಡ ಬರೆದಿದ್ದೇನೆ. ಇದನ್ನು ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಶಿ.ಜು.ಪಾಶ, ಧೀರರಾಜ್ ಹೊನ್ನವಿಲೆ, ಎಸ್.ಪಿ.ಪಾಟೀಲ್, ಲಕ್ಷ್ಮಣಪ್ಪ ಇದ್ದರು.

Cut-off box - ಮುಖ್ಯಮಂತ್ರಿಗೆ ಕ್ಷಮೆಯಾಚಿಸಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ನಿಂದಿಸಿರುವ ಸಂಸದ ಅನಂತ್‍ಕುಮಾರ್ ಹೆಗಡೆ ಅವರು ಕೂಡಲೆ ಮುಖ್ಯಮಂತ್ರಿಗೆ ಕ್ಷಮೆಯಾಚಿಸಬೇಕು. ಸಾರ್ವಜನಿಕ ಜೀವನದಲ್ಲಿದ್ದಾಗ ಎಚ್ಚರದಿಂದ ಇರಬೇಕು. ದೇವಸ್ಥಾನಗಳ ಕಸ ಹೊಡೆದರೆ ಸಾಲದು ಮನಸ್ಸಿನ ಕಸವನ್ನೂ ಹೊಡೆದುಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದರು. ನೈರುತ್ಯ ಪದವೀಧರ ಕ್ಷೇತ್ರ: ಇಂದಿನಿಂದ ಪ್ರವಾಸ ಜಿಲ್ಲೆಯಲ್ಲಿ 42 ವರ್ಷದಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾದಿಸಿಲ್ಲ. ಆದ್ದರಿಂದ ರಾಜ್ಯದ ನಾಯಕರು ಸೂಚನೆ ಹಾಗೂ ಕ್ಷೇತ್ರದಲ್ಲಿ ಓಡಾಡುವಂತೆ ಸಲಹೆ ನೀಡಿದ್ದಾರೆ. ಇಲ್ಲಿ ಪಕ್ಷ ನನಗೇ ಟಿಕೇಟ್ ನೀಡುವ ಭರವಸೆ ಇದೆ. ಆದ್ದರಿಂದ ಕ್ಷೇತ್ರದಲ್ಲಿ ಜ.17 ರಿಂದ ಕ್ಷೇತ್ರ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಆಯನೂರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT