ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (ವಿಐಎಸ್ಎಲ್) ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಚುನಾವಣೆ ಡಿ 28ರಂದು ನಡೆಯಲಿದೆ. 15 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 32 ಮಂದಿ ಕಣದಲ್ಲಿದ್ದಾರೆ.

ಸಿಲ್ವರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ಜರುಗಲಿದೆ. 2,902 ಮಂದಿ ನಿವೃತ್ತ ನೌಕರರು ಮತ ಚಲಾಯಿಸಲಿದ್ದಾರೆ. ಇದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ಹಾಲಿ ಅಧ್ಯಕ್ಷ ಬಿ.ಜೆ.ರಾಮಲಿಂಗಯ್ಯ ನೇತೃತ್ವದಲ್ಲಿ ಹಾಲಿ ನಿರ್ದೇಶಕರಾದ ಅಡವೀಶಯ್ಯ, ಕೆಂಪಯ್ಯ, ಎಸ್.ಗಜೇಂದ್ರ, ಎಲ್. ಬಸವರಾಜಪ್ಪ, ಎಸ್.ಎಸ್.ಭೈರಪ್ಪ, ಬಿ. ಮಂಜುನಾಥ್, ಮಹೇಶ್ವರಪ್ಪ, ಬಿ.ಕೆ.ರವೀಂದ್ರ ರೆಡ್ಡಿ, ಬಿ.ಜೆ.ರಾಮಲಿಂಗಯ್ಯ, ಲಾಜರ್, ಜಿ. ಶಂಕರ್, ಎಸ್.ಎಚ್.ಹನುಮಂತರಾವ್, ಹೊಸದಾಗಿ ರಾಮಪ್ಪ ವಿ. ಮುನೇನಕೊಪ್ಪ, ಎನ್.ಆರ್.ಜಯರಾಜ್ ಮತ್ತು ಪಿ.ಮಂಜುನಾಥ ರಾವ್ ಕಣಕ್ಕಿಳಿದಿದ್ದಾರೆ.

ವಿಐಎಸ್ಎಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಹೆಸರಿನಲ್ಲಿ ಎ. ಈಶ್ವರಪ್ಪ, ಕರೀಂ ಫಿರಾನ್, ಕೆ.ಎನ್.ಗಂಗಾಧರ ಸ್ವಾಮಿ, ಚಂದ್ರಮೋಹನ್, ಎಸ್. ನರಸಿಂಹಚಾರ್, ನಾಗರಾಜ, ಎಸ್.ಈ.ನಂಜುಂಡೇಗೌಡ, ಎಸ್. ನಾಗರಾಜ, ಕೆ.ಮುರಳಿಧರ, ರಾಜ, ಕೆ. ರಾಜಪ್ಪ, ಬಿ. ರಾಮಚಂದ್ರ, ಬಿ.ಎನ್.ಶ್ರೀನಿವಾಸ ಮತ್ತು ಬಿ.ಎಸ್. ಶ್ರೀನಿವಾಸಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.

ಹಾಲಿ ಅಧ್ಯಕ್ಷ ಬಿ.ಜೆ.ರಾಮಲಿಂಗಯ್ಯ 3 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಜೆ.ಎಸ್.ನಾಗಭೂಷಣ್ 3 ಬಾರಿ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ್ ಒಂದು ಬಾರಿ ಆಯ್ಕೆಯಾಗಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.