ಸಾಗರ: ದೆಹಲಿ ಹಾಗೂ ಹರಿಯಾಣ ರಾಜ್ಯಕ್ಕೆ ₹ 40 ಲಕ್ಷ ವೆಚ್ಚದಲ್ಲಿ ಅಧ್ಯಯನ ಪ್ರವಾಸ ಹೊರಡಲು ನಗರಸಭೆ ಸದಸ್ಯರು ಸಿದ್ಧತೆ ನಡೆಸಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಬಿಜೆಪಿಯ 16 ಸದಸ್ಯರು ಪ್ರವಾಸದಿಂದ ಹಿಂದೆ ಸರಿಯಲು ತೀರ್ಮಾನಿಸಿರುವುದಾಗಿ ಮಂಗಳವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಈ ನಡುವೆ, ‘ಪ್ರವಾಸ ಹೋಗುವ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ಸದಸ್ಯರು ಅವರವರೇ ಸ್ವಯಂ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವಿಪಕ್ಷ ಕಾಂಗ್ರೆಸ್ನ ಸಭಾ ನಾಯಕ ಗಣಪತಿ ಮಂಡಗಳಲೆ ಹೇಳಿದರು.

‘ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿ ಮಾಡುವ ಉದ್ದೇಶ ಯಾವ ಸದಸ್ಯರಿಗೂ ಇಲ್ಲ ಎಂಬುದು ಸ್ಪಷ್ಟ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ನಾವು ತಪ್ಪಿತಸ್ಥರಾಗಬಾರದು. ಈ ರೀತಿಯ ಉತ್ತರದಾಯಿತ್ವ ಜನಪ್ರತಿನಿಧಿಗಳಾದವರಿಗೆ ಇರಬೇಕಾಗುತ್ತದೆ’ ಎಂದು ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಹೇಳಿದರು.

‘ವೈಯಕ್ತಿಕವಾಗಿ ನಾನು ಪ್ರವಾಸಕ್ಕೆ ತೆರಳುವುದಿಲ್ಲ. ಆದರೆ, ಅಧ್ಯಯನಕ್ಕಾಗಿ ಪ್ರವಾಸಕ್ಕೆ ತೆರಳುವ ಉತ್ಸಾಹದಲ್ಲಿರುವವರಿಗೆ ಬೇಡ ಎಂದು ಹೇಳುವುದು ತಪ್ಪಾಗುತ್ತದೆ. ಶಾಸಕರು ಅಧ್ಯಯನ ಪ್ರವಾಸಕ್ಕೆ ಒಪ್ಪಿಗೆ ನೀಡಿ ಪತ್ರವನ್ನು ಸಹ ನೀಡಿದ್ದಾರೆ’ ಎಂದು ಕಾಂಗ್ರೆಸ್ನ ಗಣಪತಿ ಮಂಡಗಳಲೆ ಸ್ಪಷ್ಟಪಡಿಸಿದರು.

‘ಭೂ ಕಂದಾಯ ಅಧಿನಿಯಮ ಕಲಂ 94 ಸಿಸಿ ಅಡಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡುವ ವಿಷಯದಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಖಾಲಿ ಇರುವ ಸರ್ಕಾರಿ ಜಾಗ ನೋಡಿ ಬೇಲಿ ಹಾಕಿ ಕಲರ್ ಜೆರಾಕ್ಸ್ ಮೂಲಕ ನಕಲಿ ಹಕ್ಕುಪತ್ರ ಸೃಷ್ಟಿಸುವ ಜಾಲ ಕೆಲಸ ಮಾಡುತ್ತಿದೆ. ಈವರೆಗೆ ವಿತರಿಸಿರುವ ಹಕ್ಕುಪತ್ರದ ಕುರಿತು ಎಲ್ಲ ಸದಸ್ಯರಿಗೆ ಮಾಹಿತಿ ನೀಡಿ’ ಎಂದು ಟಿ.ಡಿ.ಮೇಘರಾಜ್ ಒತ್ತಾಯಿಸಿದರು.

‘ನಗರದ ಶಿವಮೊಗ್ಗ ರಸ್ತೆಯ ಬಾಪಟ್ ಕಲ್ಯಾಣ ಮಂಟಪದ ಎದುರು ನಗರಸಭೆಗೆ ಸೇರಿದ ಸ್ವತ್ತಿಗೆ ರಸ್ತೆಯನ್ನೂ ಸೇರಿಸಿಕೊಂಡು ಕೆಲವರು ಕಾಂಪೌಂಡ್ ನಿರ್ಮಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ರವಿ ಲಿಂಗನಮಕ್ಕಿ ಆಗ್ರಹಿಸಿದರು.

‘ನಕಲಿ ಹಕ್ಕುಪತ್ರ ಎಂದು ಗುರುತಿಸಲಾಗದ ರೀತಿಯಲ್ಲಿ ಅವುಗಳನ್ನು ಸೃಷ್ಟಿಸಲಾಗುತ್ತಿದೆ. ಅನುಮಾನ ಬಂದಲ್ಲಿ ಖಾತೆ ಮಾಡಲು ನಿರಾಕರಿಸಿದ್ದಕ್ಕೆ ನಗರಸಭೆ ಅಧಿಕಾರಿಗಳ ಮೇಲೆ ಒತ್ತಡ ಬಂದಿದೆ. ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ತಹಶೀಲ್ದಾರರಿಗೆ ಹಕ್ಕುಪತ್ರದ ನೈಜತೆ ಕುರಿತು ಪತ್ರ ಬರೆಯುವಂತೆ ಸಲಹೆ ನೀಡಿದ್ದಾರೆ’ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.

‘ಘನ ತಾಜ್ಯ ವಿಲೇವಾರಿ ಘಟಕಕ್ಕೆ ನಿರಂತರವಾಗಿ ಹಣ ವೆಚ್ಚ ಮಾಡಲಾಗುತ್ತಿದೆ. ಈವರೆಗೆ ಅಂದಾಜು ₹ 15 ಕೋಟಿ ಹಣ ಖರ್ಚಾಗಿದೆ. ಆದಾಗ್ಯೂ ಅಲ್ಲಿನ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಯಾವಾಗ’ ಎಂದು ಬಿಜೆಪಿ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಪ್ರಶ್ನಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.