ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಕರ್ನಾಟಕ ಸಂಘ; 12 ಲೇಖಕರಿಗೆ ಪುಸ್ತಕ ಬಹುಮಾನ

-
Published 3 ನವೆಂಬರ್ 2023, 16:59 IST
Last Updated 3 ನವೆಂಬರ್ 2023, 16:59 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘದ 2022ನೇ ಸಾಲಿನ ಪುಸ್ತಕ ಬಹುಮಾನಗಳನ್ನು 12 ಮಂದಿ ಲೇಖಕರಿಗೆ ನೀಡಲಾಗಿದೆ. ವಿಜೇತರಿಗೆ ತಲಾ ₹10,000 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಬಹುಮಾನ ವಿತರಣೆ ಸಮಾರಂಭ ನವೆಂಬರ್ 26ರಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪುರಸ್ಕೃತರ ವಿವರ: ಬಹುಮಾನ–ಲೇಖಕ–ಪುಸ್ತಕ

1. ಕುವೆಂಪು ಕಾದಂಬರಿ ಬಹುಮಾನ–ಎಚ್.ಬಿ. ಇಂದ್ರಕುಮಾರ್– ಎತ್ತರ

2. ಪ್ರೊ.ಎಸ್.ವಿ.ಪರಮೇಶ್ವರಭಟ್ಟ ಅನುವಾದ ಸಾಹಿತ್ಯ– ಮಾಧವ ಚಿಪ್ಪಳಿ– ಯೂರಿಪಿಡೀಸ್ ಮೂರು ನಾಟಕಗಳು

3. ಎಂ.ಕೆ.ಇಂದಿರಾ ಮಹಿಳಾ ಸಾಹಿತ್ಯ– ಮುಮ್ತಾಜ್ ಬೇಗಂ–ಲೋಕವೇ ತಾನಾದ ಬಳಿಕ

4. ಪಿ.ಲಂಕೇಶ್ ಮುಸ್ಲಿಂ ಬರಹಗಾರರು– ಫಾತಿಮಾ ರಲಿಯಾ– ಕಡಲು ನೋಡಲು ಹೋದವಳು

5. ಜಿ.ಎಸ್.ಶಿವರುದ್ರಪ್ಪ ಕವನ ಸಂಕಲನ– ನಾ.ಮೊಗಸಾಲೆ– ಬೇಲಿಯ ಗೂಟದಲ್ಲೊಂದು ಚಿಟ್ಟೆ

6. ಹಾ.ಮಾ.ನಾಯಕ ಅಂಕಣ ಬರಹಗಾರರು– ಶಶಿಧರ ಹಾಲಾಡಿ– ಉರುಳಿದ ಕಟ್ಟಡ ಮರಳಿದ ನೆನಪು

7. ಯು.ಆರ್.ಅನಂತಮೂರ್ತಿ ಸಣ್ಣ ಕಥಾ ಸಂಕಲನ– ಚಿದಾನಂದ ಸಾಲಿ–ಹೊಗೆಯ ಹೊಳೆಯಿದು ತಿಳಿಯದು

8. ಕೆ.ವಿ. ಸುಬ್ಬಣ್ಣ ನಾಟಕ ಬಹುಮಾನ– ಬಸವರಾಜ ಸಬರದ– ಜೋಡಿ ನಾಟಕಗಳು

9. ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಪ್ರವಾಸ ಸಾಹಿತ್ಯ – ಸಂತೋಷ ಕುಮಾರ ಮೆಹಂದಳೆ– ಅಲೆಮಾರಿಯ ಡೈರಿ

10. ಹಸೂಡಿ ವೆಂಕಟಶಾಸ್ತ್ರಿ ವಿಜ್ಞಾನ ಸಾಹಿತ್ಯ– ಸುಕನ್ಯಾ ಸೊನಗಹಳ್ಳಿ– ಬೆಳೆ ರೋಗಗಳು, ಕೀಟಗಳು, ಅವುಗಳ ನಿರ್ವಹಣೆ

11. ನಾ.ಡಿಸೋಜ ಮಕ್ಕಳ ಸಾಹಿತ್ಯ– ಕೊಳ್ಳೆಗಾಲ ಶರ್ಮ– ಜಾಣ ಪ್ರಶ್ನೆ

12. ಡಾ.ಎಚ್.ಡಿ.ಚಂದ್ರಪ್ಪಗೌಡ ವೈದ್ಯ ಸಾಹಿತ್ಯ– ಡಾ.‍ಪಿ.ಎಂ. ಸೂರ್ಯನಾರಾಯಣ ಶರ್ಮ– ಪಾರ್ಶ್ವವಾಯುವಿನಿಂದ ಚೈತನ್ಯದೆಡೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT