ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ತುಂಬಿದ ಆಟೊದಲ್ಲಿ ಗಾಂಜಾ: ಇಬ್ಬರ ಬಂಧನ

Last Updated 23 ಅಕ್ಟೋಬರ್ 2021, 6:46 IST
ಅಕ್ಷರ ಗಾತ್ರ

ಹೊಸನಗರ: ಪಟ್ಟಣದ ಹೊರವಲಯದ ಮಾವಿನಕೊಪ್ಪದ ಬಳಿ ಮೀನು ತುಂಬಿದ ಆಟೊದಲ್ಲಿ ಗಾಂಜಾ ಸಾಗಿಸುತ್ತಿದ್ದ ಸಂಬಂಧ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಟ್ಟೆಮಲ್ಲಪ್ಪದಿಂದ ಬರುತ್ತಿದ್ದ ಮೀನು ತುಂಬಿದ ಆಟೊದಲ್ಲಿ ಗಾಂಜಾ ಇದೆ ಎಂಬ ಮಾಹಿತಿ ಸಂಗ್ರಹಿಸಿದ ಪಿಎಸ್ಐ ರಾಜೇಂದ್ರ ನಾಯ್ಕ ಹಾಗೂ ಸಿಬ್ಬಂದಿ ಮಾವಿನಕೊಪ್ಪ ಬಳಿ ದಾಳಿ ನಡೆಸಿ ಆಟೊದಲ್ಲಿದ್ದ ಒಂದು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಫಯಾಜ್ ಬಿನ್ ಕರಿಸಾಬ್, ಕೇಶವಪುರದ ಫಿರೋಜ್‌ನನ್ನು ಬಂಧಿಸಿದ್ದಾರೆ. ಎಎಸ್ಐ ಶ್ರೀನಿವಾಸ್, ಕಿರಣ್‌ಕುಮಾರ್, ಅಶೋಕ್ ನಾಯ್ಕ, ಆದರ್ಶ, ಅಮೃತ, ಗಿರೀಶ್ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT