ಮದುವೆಗೆ ತೆರಳುತ್ತಿದ್ದಾಗ ಕಾರು ಅಪಘಾತ: ವರನ ಸಹೋದರ ಸಾವು

ಶಿಕಾರಿಪುರ: ಪಟ್ಟಣದ ಶಿವಮೊಗ್ಗ ರಸ್ತೆಯ ಕೋರ್ಟ್ ಎದುರು ಬುಧವಾರ ಮುಂಜಾನೆ ಮದುವೆಗೆ ತೆರಳುತ್ತಿದ್ದ ಕಾರು
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ವರನ ಸಹೋದರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೆಳಗಾಲಪೇಟೆ ನಿವಾಸಿ ಸಂದೀಪ್ (34) ಮೃತಟಪಟ್ಟವರು. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಏ.21ರಂದು ನಡೆಯಲಿದ್ದ ಅವರ ಸಹೋದರನ ಮದುವೆಗೆ ತೆರಳುತ್ತಿದ್ದರು.
ಕಾರಿನಲ್ಲಿ ಸಂದೀಪ್ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಸಂದೀಪ್ ಪತ್ನಿ ಜಾನಕಿ, ಸಹೋದರ ಮದುಮಗ ಪ್ರದೀಪ್, ಸಂಬಂಧಿ ಮಂಗಳ ಗಾಯಗೊಂಡಿದ್ದಾರೆ. ಜಾನಕಿ ಹಾಗೂ ಮಂಗಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.