ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಪೋಸ್ಟ್ ಬಿಗಿಗೊಳಿಸಲು ಯುವ ಕಾಂಗ್ರೆಸ್ ಒತ್ತಾಯ

Last Updated 8 ಮೇ 2020, 11:59 IST
ಅಕ್ಷರ ಗಾತ್ರ

ಶಿವಮೊಗ್ಗ: ಹಸಿರು ವಲಯದಲ್ಲಿರುವ ಜಿಲ್ಲೆಯ ಸುರಕ್ಷತೆಗೆ ಗಡಿಭಾಗಗಳ ಚೆಕ್‌ಪೋಸ್ಟ್ ಬಿಗಿಗೊಳಿಸಬೇಕುಎಂದು ಒತ್ತಾಯಿಸಿ ಯುವ ಕಾಂಗ್ರೆಸ್ಕಾರ್ಯಕರ್ತರುಶುಕ್ರವಾರಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೊರೊನಾನಿರ್ಬಂಧಗಳ ಕಾರಣಜಿಲ್ಲೆ ಜನರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಇವೆ.ಪಕ್ಕದ ದಾವಣಗೆರೆ ಜಿಲ್ಲೆಕೆಂಪು ವಲಯದಲ್ಲಿದೆ. ಅಲ್ಲಿಂದ ನಿತ್ಯವೂ ಜಿಲ್ಲೆಗೆ ಹಲವರು ಬರುತ್ತಿರುವುದು ಆತಂಕ ಸೃಷ್ಟಿಸಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಗ್ರಾಮಗಳ ಮುಖಾಂತರ ಸಾರ್ವಜನಿಕರು ಉಪ-ರಸ್ತೆಗಳಲ್ಲಿ ಬರುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ,ದಾವಣಗೆರೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಮುಖ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್ನಿರ್ಮಿಸಿದೆ. ಕೆಲವರುಆನ್‌ಲೈನ್‌ ಪಾಸ್‌ ಪಡೆದು ಮಡಿಕೆಚೀಲೂರು, ಸುತ್ತುಕೋಟೆ, ಕುಂಸಿ, ಚೋರಡಿಚೆಕ್‌ಪೋಸ್ಟ್‌ಗಳ ಮೂಲಕ ಬರುತ್ತಿದ್ದಾರೆ ಎಂದುಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಉಪ ರಸ್ತೆಗಳಲ್ಲೂಚೆಕ್‌ಪೋಸ್ಟ್ ನಿರ್ಮಿಸಬೇಕು. ಜಿಲ್ಲೆಗೆ ಹೊರಗಿನ ಜನರ ಪ್ರವೇಶ ತಡೆಯಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಎಚ್.ಪಿ.ಗಿರೀಶ್, ಮುಖಂಡರಾದ ಕೆ ರಂಗನಾಥ್, ಎಂ.ಪ್ರವೀಣ್ ಕುಮಾರ್, ಟಿ.ವಿ.ರಂಜಿತ್, ಇ.ಟಿ ನಿತಿನ್ ರಾವ್, ಸಿದ್ದೇಶ್, ಗಣೇಶ್, ಚಂದನ್, ನಂದನ್, ಸತೀಶ್, ಶ್ರೀನಿವಾಸ್ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT