ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ನಗೆ ಬೀರಿದ ಕಾಂಗ್ರೆಸ್; ಬಿಜೆಪಿಗೆ ಮುಖಭಂಗ

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ
Last Updated 1 ಮೇ 2021, 7:28 IST
ಅಕ್ಷರ ಗಾತ್ರ

ತೀರ್ಥಹಳ್ಳಿ: 23 ವರ್ಷಗಳ ನಂತರ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯುವ ಮೂಲಕ ಬಿಜೆಪಿ ಓಟಕ್ಕೆ ತಡೆಯೊಡ್ಡಿದೆ.

ಪಟ್ಟಣದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಎಣಿಕೆ ಕಾರ್ಯ ನಡೆಯಿತು. ಕೇವಲ 2 ಗಂಟೆಯೊಳಗೆ ಎಲ್ಲ 15 ವಾರ್ಡ್‌ಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸಿದರು.

ಕಾಂಗ್ರೆಸ್ 9 ಸ್ಥಾನ ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಬಿಜೆಪಿ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಶಿವಮೊಗ್ಗ ರಂಗಾಯಣ ನಿರ್ದೇಶಕ ಬಿಜೆಪಿಯ ಸಂದೇಶ ಜವಳಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ರಹಮತ್ ಉಲ್ಲಾ ಅಸಾದಿ ಸತತ 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಸೊಪ್ಪುಗುಡ್ಡೆ ರಾಘವೇಂದ್ರ ಅವರು 3ನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ನ ಗೀತಾ ರಮೇಶ್, ಶಬನಮ್ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಬಿಜೆಪಿ ಮುಖಂಡ, ಮಾಜಿ ಸದಸ್ಯ ಜೆ.ಮಂಜುನಾಥಶೆಟ್ಟಿ, ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಆರ್.ರಾಘವೇಂದ್ರ ಶೆಟ್ಟಿ ಪರಾಭವಗೊಂಡಿದ್ದಾರೆ. ಸತತ 23 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆಬಿದ್ದಂತಾಗಿದೆ. 9 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದು, ಕೇವಲ 6 ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ವಿಜೇತರ ವಿವರ ಇಂತಿದೆ:

ವಾರ್ಡ್ ನಂ. 1: ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ)– 278, ಸಮೀಪದ ಸ್ಪರ್ಧಿ– ಎನ್.ಕೆ.ಪ್ರದೀಪ್ (ಕಾಂಗ್ರೆಸ್), ಪಡೆದ ಮತ 94, ಗೆಲುವಿನ ಅಂತರ 184 ಮತ.

ವಾರ್ಡ್ ನಂ. 2: ಯತಿರಾಜ್ (ನವೀನ್), (ಬಿಜೆಪಿ)– 422, ಬಿ.ಆರ್.ರಾಘವೇಂದ್ರ ಶೆಟ್ಟಿ (ಕಾಂಗ್ರೆಸ್), ಪಡೆದ ಮತ 372, ಗೆಲುವಿನ ಅಂತರ 50.

ವಾರ್ಡ್ ನಂ. 3: ರತ್ನಾಕರ ಶೆಟ್ಟಿ (ದತ್ತಣ್ಣ), (ಕಾಂಗ್ರೆಸ್)– 340, ಸಮೀಪದ ಸ್ಪರ್ಧಿ– ನವೀನ್ ಕುಮಾರ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 127.

ವಾರ್ಡ್ ನಂ. 4: ನಮ್ರತ್ ರಮೇಶ್ (ಕಾಂಗ್ರೆಸ್)– 349,ಸಮೀಪದ ಸ್ಪರ್ಧಿ– ಸಿ.ಶ್ರೀನಿವಾಸ್ (ಬಿಜೆಪಿ), ಪಡೆದ ಮತ 129, ಗೆಲುವಿನ ಅಂತರ 220.

ವಾರ್ಡ್ ನಂ. 5: ಸುಶೀಲಾ ಶೆಟ್ಟಿ (ಕಾಂಗ್ರೆಸ್)– 319, ಸಮೀಪದ ಸ್ಪರ್ಧಿ– ಕೆ.ವಿದ್ಯಾವತಿ (ಬಿಜೆಪಿ), ಪಡೆದ ಮತ 250, ಗೆಲುವಿನ ಅಂತರ 69.

ವಾರ್ಡ್ ನಂ. 6: ಶಬನಮ್ (ಕಾಂಗ್ರೆಸ್) ಪಡೆದ ಮತ 302, ಸಮೀಪದ ಸ್ಪರ್ಧಿ– ಸುಷ್ಮಾ ಮಹೇಶ್ (ಬಿಜೆಪಿ), ಪಡೆದ ಮತ 195, ಗೆಲುವಿನ ಅಂತರ 7.

ವಾರ್ಡ್ ನಂ. 7: ಜಯಪ್ರಕಾಕಾಶ್ ಶೆಟ್ಟಿ (ಜೈಯು) (ಕಾಂಗ್ರೆಸ್)– 253,ಸಮೀಪದ
ಸ್ಪರ್ಧಿ– ಜೆ.ಮಂಜುನಾಥಶೆಟ್ಟಿ (ಬಿಜೆಪಿ), ಪಡೆದ ಮತ 222, ಗೆಲುವಿನ ಅಂತರ 31.

ವಾರ್ಡ್ ನಂ. 8: ಜ್ಯೋತಿ ಗಣೇಶ್ (ಬಿಜೆಪಿ)– 275, ಸಮೀಪದ ಸ್ಪರ್ಧಿ– ಟಿ.ಸಿ.ವಿಜಯ (ಕಾಂಗ್ರೆಸ್), ಪಡೆದ ಮತ 262, ಗೆಲುವಿನ ಅಂತರ 13.

ವಾರ್ಡ್ ನಂ. 9: ಸಂದೇಶ ಜವಳಿ (ಬಿಜೆಪಿ)– 319, ಸಮೀಪದ ಸ್ಪರ್ಧಿ– ಹರೀಶ್ ಮಿಲ್ಕೇರಿ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 289, ಗೆಲುವಿನ ಅಂತರ 21.

ವಾರ್ಡ್ ನಂ. 10: ಬಿ.ಗಣಪತಿ (ಕಾಂಗ್ರೆಸ್)– 284, ಸಮೀಪದ ಸ್ಪರ್ಧಿ– ಎಂ.ಮಹೇಶ್ (ಬಿಜೆಪಿ), ಪಡೆದ ಮತ 220, ಗೆಲುವಿನ ಅಂತರ 64.

ವಾರ್ಡ್ ನಂ. 11: ಜ್ಯೋತಿ ಮೋಹನ್ ಭಟ್ (ಬಿಜೆಪಿ)– 278, ಸಮೀಪದ ಸ್ಪರ್ಧಿ– ನವ್ಯಾ ವಿ.ರಾವ್ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 194, ಗೆಲುವಿನ ಅಂತರ 84.

ವಾರ್ಡ್ ನಂ. 12: ರವೀಶ್ (ಬಾಬಿ) (ಬಿಜೆಪಿ)– 430(ಗೆಲುವು), ಸಮೀಪದ ಸ್ಪರ್ಧಿ– ಕೆ.ಎಸ್.ಕಿಶೋರ್ (ಕಾಂಗ್ರೆಸ್) ಪಡೆದ ಮತ 341, ಗೆಲುವಿನ ಅಂತರ 89.

ವಾರ್ಡ್ ನಂ. 13: ಗೀತಾ ರಮೇಶ್ (ಕಾಂಗ್ರೆಸ್)– 295, ಸಮೀಪದ
ಸ್ಪರ್ಧಿ– ಅನಿತಾ ಪೆರಾವೋ (ಬಿಜೆಪಿ), ಪಡೆದ ಮತ 146, ಗೆಲುವಿನ ಅಂತರ 149.

ವಾರ್ಡ್ ನಂ. 14: ಮಂಜುಳಾ ನಾಗೇಂದ್ರ (ಕಾಂಗ್ರೆಸ್)– 428, ಸಮೀಪದ ಸ್ಪರ್ಧಿ– ನಿಶಾ ಪ್ರಮೋದ್ ಪೂಜಾರಿ (ಬಿಜೆಪಿ), ಪಡೆದ ಮತ 343, ಗೆಲುವಿನ ಅಂತರ 85.

ವಾರ್ಡ್ ನಂ. 15: ರಹಮತ್ ಉಲ್ಲಾ ಅಸಾದಿ (ಕಾಂಗ್ರೆಸ್)– 324, ಸಮೀಪದ ಸ್ಪರ್ಧಿ– ದಯಾನಂದ ಸಾಲಿಯಾನ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 111.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT