ಮತಾಂತರ ಆರೋಪ: ಮನೆ ಮುಂದೆ ಜಮಾಯಿಸಿದ ಜನ
ಸಾಗರ: ಇಲ್ಲಿನ ಗೋಪಾಲಗೌಡ ನಗರ ಬಡಾವಣೆಯಲ್ಲಿ ಮಹಿಳೆಯೊಬ್ಬರ ಮತಾಂತರ ಮಾಡಲಾಗಿದೆ ಎಂಬ ಅನುಮಾನದ ಕಾರಣ ಅವರ ಮನೆಯ ಮುಂದೆ ಜನರ ಗುಂಪು ಜಮಾವಣೆಯಾಗಿತ್ತು.
ಮಹಿಳೆಯೊಬ್ಬರು ತನ್ನ ಗಂಡ ಕುಡಿಯುವುದನ್ನು ಬಿಟ್ಟರೆ ಮೇರಿ ಮಾತೆಯ ಪ್ರತಿಮೆ ತಂದು ಪೂಜಿಸುವುದಾಗಿ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಹೀಗಾಗಿ ಭಾನುವಾರ ಅವರು ಮೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದ್ದರು.
ಇದು ಮತಾಂತರವಾಗಿದೆ ಎಂಬ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಯಾವುದೇ ರೀತಿಯ ಮತಾಂತರ ನಡೆದಿಲ್ಲ ಎಂಬ ವಿಷಯ ಗೊತ್ತಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.