ಶನಿವಾರ, ಸೆಪ್ಟೆಂಬರ್ 26, 2020
23 °C
ಶಿವಮೊಗ್ಗ ನಗರದಲ್ಲೇ 90 ಕೋವಿಡ್‌ ರೋಗಿಗಳು ಪತ್ತೆ, ಇಬ್ಬರ ಸಾವು

ಶಿವಮೊಗ್ಗ | ಆಶಾ ಕಾರ್ಯಕರ್ತೆ ಸೇರಿ 127 ಜನರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಾಣಂತಿ, ಆಶಾ ಕಾರ್ಯಕರ್ತೆ ಸೇರಿ ಜಿಲ್ಲೆಯಲ್ಲಿ ಬುಧವಾರ 127 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,  ಇಬ್ಬರು ಮೃತಪಟ್ಟಿದ್ದಾರೆ. 30 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 90 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯ 11, ಶಿಕಾರಿಪುರ 8, ಸೊರಬ 5, ಸಾಗರ 2 ತೀರ್ಥಹಳ್ಳಿ 2,  ಹೊಸನಗರ 6  ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ಬಂದಿದ್ದ ಹೊರ ಜಿಲ್ಲೆಯ 3 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 1,603ಕ್ಕೆ ಏರಿದೆ. ಬುಧವಾರ 30 ಜನರು ಸೇರಿದಂತೆ 834 ಮಂದಿ ಗುಣಮುಖರಾಗಿದ್ದಾರೆ. ಮನೆಯಲ್ಲಿ 51, ಖಾಸಗಿ ಆಸ್ಪತ್ರೆಗಳಲ್ಲಿ 35 ಜನರು ಸೇರಿ ಒಟ್ಟು 741 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 28 ಜನರು ಮೃತಪಟ್ಟಿದ್ದಾರೆ. 

362 ಕಂಟೈನ್‌ಮೆಂಟ್ ಝೋನ್‌: ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 362 ಕಂಟೈನ್‌ಮೆಂಟ್‌ ಝೋನ್‌ಗಳನ್ನು ಮಾಡಲಾಗಿದೆ. 97 ಝೋನ್‌ಗಳನ್ನು ತೆರವುಗೊಳಿಸಲಾಗಿದೆ. 

ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆ ನಗರದ ಆರ್‌ಟಿಒ ಕಚೇರಿಯನ್ನು ಸೀಲ್‌ಡೌನ್‌ ಮಾಡಿ ಸ್ಯಾನಿಟೈಸರ್ ಸಿಂಪರಣೆ ಮಾಡಲಾಗಿದೆ. ಎರಡು ದಿನ ಕಚೇರಿಗೆ ಬೀಗ ಬಿದ್ದಿದೆ.

7 ವರ್ಷದ ಬಾಲಕಿಗೆ ಸೋಂಕು

ತೀರ್ಥಹಳ್ಳಿ ತಾಲ್ಲೂಕಿನಲ್ಲಿ 4 ಮಂ ದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೋಣಂದೂರು ಸಮೀಪ ಅಕ್ಲಾಪುರದ 30 ವರ್ಷದ ಮಹಿಳೆ, 7 ವರ್ಷದ ಬಾಲಕಿ, ಮೇಲಿನ ಕುರುವಳ್ಳಿಯ 23 ವರ್ಷದ ಯುವಕನಿಗೆ ಸೊಂಕು ತಗಲಿದೆ.

ತಾಲ್ಲೂಕಿನಲ್ಲಿ ಇದುವರೆಗೆ 47 ಮಂದಿಗೆ ಸೋಂಕು ತಗಲಿದ್ದು, 3 ದಿನದ ಹಿಂದೆ ಪಟ್ಟಣ ಪಂಚಾಯತಿ ಸಿಬ್ಬಂದಿ ಮೃತಪಟ್ಟಿದ್ದು ಅವರಿಗೆ ಸೋಂಕು ಇರುವುದು ಖಚಿತವಾಗಿದೆ ದೃಢಪಟ್ಟಿದೆ. ಈ ಕಾರಣ ಪಟ್ಟಣ ಪಂಚಾಯತಿ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಬುಧವಾರ ಕಚೇರಿ ಆರಂಭವಾಗಿದೆ. ಈಗ ಮತ್ತೊಬ್ಬರಿಗೆ ಸೋಂಕು ಪತ್ತೆಯಾಗಿದೆ.

ನಾಲ್ವರಿಗೆ ಸೋಂಕು

ಭದ್ರಾವತಿ ನಗರದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ಬುಧವಾರ ವರದಿಯಾಗಿದೆ. ಹಳೇನಗರ ಪೇಟೆಬೀದಿ 55 ವರ್ಷದ ಮಹಿಳೆ, ಚನ್ನಗಿರಿ ರಸ್ತೆ ಯ 65 ವರ್ಷದ ಪುರುಷ, ರಾಜಪ್ಪ ಲೇಔಟ್‌ನ  45 ವರ್ಷದ ಪುರುಷ ಹಾಗೂ ಅಶ್ವತ್ಥನಗರ 67 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಒಂದು ಪಾಸಿಟಿವ್ ಪ್ರಕರಣ

ಸಾಗರ ತಾಲ್ಲೂಕಿನಲ್ಲಿ ಇಂದಿರಾಗಾಂಧಿ ಮಹಿಳಾ ಕಾಲೇಜು ಸಮೀಪದ 40 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ತಾಲ್ಲೂಕಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 66 ಕ್ಕೆ ಏರಿದೆ.

ಹತ್ತು ಮಂದಿಗೆ ಸೋಂಕು

ಹೊಸನಗರ ತಾಲ್ಲೂಕಿನಲ್ಲಿ ಆಶಾ ಕಾರ್ಯಕರ್ತೆ ಸೇರಿ ತಾಲ್ಲೂಕಲ್ಲಿ 10 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಲ್ಲಿನ ಮಸೀದಿ ರಸ್ತೆಯ ನಿವಾಸಿ ಗಾರೆ ಕೆಲಸದ ವ್ಯಕ್ತಿಗೆ ಮಂಗಳವಾರ ಪಾಸಿಟಿವ್‌ ಬಂದಿತ್ತು. ಇಂದು ಅವರ ಮನೆಯ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ.  ಪಕ್ಕದ ಮನೆಯ ಮೂರು ಮಂದಿ, ಮಾರಿಗುಡ್ಡದ ಬಾಣಂತಿಗೂ ಸೋಂಕು ತಗುಲಿದೆ. ಎಲ್ಲರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರು ಜನರಿಗೆ ಕೊರೊನಾ ದೃಢ

ಸೊರಬ ತಾಲ್ಲೂಕಿನಲ್ಲಿ ಬುಧವಾರ ಆರು ಜನರಿಗೆ ಕೊರಾನಾ ‌ ಸೋಂಕು ದೃಢಪಟ್ಟಿದೆ. ತಾಲ್ಲೂಕಿನ ನೆಲ್ಲಿಕೊಪ್ಪ ಗ್ರಾಮದ 50 ವರ್ಷದ ಪುರುಷ, ಗಿಣಿವಾಲ ಗ್ರಾಮದ 34 ವರ್ಷದ ಪುರುಷ, ನೇರಲಗಿ ಗ್ರಾಮದ 46 ವರ್ಷದ ಪುರುಷ, ಮುಟುಗುಪ್ಪೆ ಗ್ರಾಮದ 35 ವರ್ಷದ ಮಹಿಳೆ, ಆನವಟ್ಟಿಯ 20 ವರ್ಷದ ಯುವಕ ಹಾಗೂ ಪಟ್ಟಣದ ಕಾನಕೇರಿ ಬಡಾವಣೆಯ 16 ವರ್ಷದ ಬಾಲಕ ಸೇರಿದಂತೆ ಆರು ಜನರಿಗೆ ಸೋಂಕು ತಗುಲಿದೆ. ತಾಲ್ಲೂಕಿನಲ್ಲಿ ಒಟ್ಟು ಕೊರಾನಾ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು