ಶಿವಮೊಗ್ಗ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೇರಿ ಜಿಲ್ಲೆಯಲ್ಲಿ ಶುಕ್ರವಾರ 121 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. 157 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 78 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 10, ಶಿಕಾರಿಪುರದಲ್ಲಿ 17, ಸಾಗರದಲ್ಲಿ 5, ತೀರ್ಥಹಳ್ಳಿ 8, ಹೊಸನಗರದಲ್ಲಿ ಮೂವರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 2,598ಕ್ಕೆ ಏರಿದೆ. ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 157 ಸೇರಿ 1,532 ಮಂದಿ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 162, ಖಾಸಗಿ ಆಸ್ಪತ್ರೆಗಳಲ್ಲಿ 101 ಜನರು ಸೇರಿ ಒಟ್ಟು 1,014 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 52 ಜನರು ಮೃತಪಟ್ಟಿದ್ದಾರೆ.

ತಾಯಿ, ಮಗಳಿಗೆ ಸೋಂಕಿ ದೃಢ (ತೀರ್ಥಹಳ್ಳಿ ವರದಿ)

ತಾಲ್ಲೂಕಿನ ಮೇಗರವಳ್ಳಿ ಪುರುಷನಿಗೆ ಸೋಂಕು ತಗಲಿದೆ. ಅವರ ಮನೆಯ ತಾಯಿ, ಮಗಳಿಗೆ ಸೇರಿ ನಾಲ್ವರಿಗೆ, ಮೇಳಿಗೆಯಲ್ಲಿ ಮಹಿಳೆಗೆ ಹಾಗೂ ಭಾರತೀಪುರದ ಯುವತಿಗೆ,ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಕೃಷಿ ಇಲಾಖೆ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ಮೂವರಿಗೆ ಪಾಸಿಟಿವ್ (ಹೊಸನಗರ ವರದಿ)

ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಬ್ಬಂದಿ ಹಾಗೂ ನಗರದ ಮಹಿಳೆಗೆ ಪಾಸಿಟಿವ್ಇದೆ.ಇವರಿಬ್ಬರನ್ನು ಮೆಗ್ಗಾನ್ ದಾಖಲಿಸಲಾಗಿದೆ. ತಾಲ್ಲೂಕಿನ ಗವಟೂರಿನ ಒಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

7 ಮಂದಿಗೆ ಕೊರೊನಾ (ಭದ್ರಾವತಿ ವರದಿ)

ಭದ್ರಾವತಿ ತಾಲ್ಲೂಕಿನಲ್ಲಿ 7 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಗಾಂಧಿನಗರ 50 ವರ್ಷದ ಮಹಿಳೆ, ಜೇಡಿಕಟ್ಟೆ ಹೊಸೂರು 41 ವರ್ಷದ ಪುರುಷ, ಬಿಎಚ್ ರಸ್ತೆ 42 ವರ್ಷದ ಪುರುಷ, ಮರಾಠಬೀದಿ 11 ವರ್ಷದ ಬಾಲಕಿ, ಇಂದಿರಾನಗರ 23 ವರ್ಷದ ಮಹಿಳೆ, ಬಸಲೀಕಟ್ಟೆ , 32 ವರ್ಷದ ಗಂಡು, ಎಂಸಿ ಹಳ್ಳಿ 47 ವರ್ಷದ ಪುರುಷನಿಗೆಸೋಂಕು ಖಚಿತವಾಗಿದೆ.

ನಾಲ್ವರಿಗೆ ಸೋಂಕು (ಸಾಗರ ವರದಿ)

ತಾಲ್ಲೂಕಿನಲ್ಲಿ ಶುಕ್ರವಾರದ ನಾಲ್ವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.ಚಾಮರಾಜಪೇಟೆ ಬಡಾವಣೆಯ 61 ವರ್ಷದ ಪುರುಷ, 82 ವರ್ಷದ ಮಹಿಳೆ, ಅಣಲೆಕೊಪ್ಪ ಬಡಾವಣೆಯ 60 ವರ್ಷದ ಪುರುಷ,55 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ಗರ್ಭಿಣಿ ಸೇರಿ 17 ಮಂದಿಗೆ ಸೋಂಕು (ಶಿಕಾರಿಪುರ ವರದಿ)

ತಾಲ್ಲೂಕಿನ ಬೈರನಹಳ್ಳಿ ಗ್ರಾಮದ ಗರ್ಭಿಣಿ ಸೇರಿದಂತೆ ತಾಲ್ಲೂಕಿನಲ್ಲಿ 17 ಮಂದಿಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ.

ಪಟ್ಟಣದ ಹಳೇ ಹೊನ್ನಾಳಿ ರಸ್ತೆ ನಿವಾಸಿ ಪುರುಷ, ಕಿಟ್ಟದಹಳ್ಳಿ ಗ್ರಾಮದ ಮಹಿಳೆ, ಪುರುಷನಿಗೆ, ಶಿರಳ್ಳಿ ತಾಂಡದ ಮಹಿಳೆಗೆ, ಉಡುಗಣಿ ಗ್ರಾಮದ ಪುರುಷನಿಗೆ, ಬಿಳಿಕಿ ಗ್ರಾಮದ ಇಬ್ಬರು ಪುರುಷರಿಗೆ, ಬಿಸ್ಲಳ್ಳಿ ಗ್ರಾಮದ ಯುವಕನಿಗೆ, ಶಿರಾಳಕೊಪ್ಪ ಪಟ್ಟಣದಲ್ಲಿ ಪುರುಷ, ಮಹಿಳೆಗೆ, ಕಪ್ಪನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಒಬ್ಬರಿಗೆ, ಮತ್ತಿಕೋಟೆ ಗ್ರಾಮದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇಬ್ಬರಿಗೆ, ಶಿರಾಳಕೊಪ್ಪ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೂವರಿಗೆ ಸೋಂಕುಇರುವುದುದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.