ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಇಬ್ಬರು ಮಹಿಳೆಯರ ಸಾವು

700 ದಾಟಿದ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ, ಮೃತರು 14
Last Updated 16 ಜುಲೈ 2020, 17:15 IST
ಅಕ್ಷರ ಗಾತ್ರ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಗುರುವಾರ ಇಬ್ಬರು ಕೋವಿಡ್‌ ರೋಗಿಗಳು ಮೃತಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಟಿಪ್ಪು ನಗರದ 55 ವರ್ಷದ ಮಹಿಳೆ, ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಬಂದಿದ್ದ ಚಿಕ್ಕಮಗಳೂರು ಜಿಲ್ಲೆ ಬೀರೂರಿನ 60 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 58 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 700 ದಾಟಿದೆ. ಗುರುವಾರ 38 ಜನರು ಸೇರಿದಂತೆ ಇದುವರೆಗೂ 280 ಜನರು ಗುಣಮುಖರಾಗಿದ್ದಾರೆ. 409 ಮಂದಿ ವಿವಿಧ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೆಗ್ಗಾನ್‌ನಲ್ಲಿ 176 ಜನರು, 219 ಜನ ಕೋವಿಡ್ ಇತರೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಗೂ 14 ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಸೋಂಕು ಪತ್ತೆಯಾದವರಲ್ಲಿ ಶಿವಮೊಗ್ಗ ನಗರದಲ್ಲೇ 37 ಇದ್ದಾರೆ. ಭದ್ರಾವತಿ 3, ಸಾಗರ 4, ಶಿಕಾರಿಪುರ 3, ಹೊಸನಗರ 2, ತೀರ್ತಹಳ್ಳಿ, ಸೊರಬ ತಾಲ್ಲೂಕಿನ ತಲಾ ಒಬ್ಬರು ಇದ್ದಾರೆ. ಬೆಂಗಳೂರಿನಿಂದ ಬಂದ ಇಬ್ಬರು, ದಾವಣಗೆರೆಯಿಂದ ಇಬ್ಬರು, ಚಿಕ್ಕಮಗಳೂರಿನಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಹೊಸಮನೆ ಬಡಾವಣೆಯಲ್ಲಿ 2ನೇ ತಿರುವು,ಹೊಸಮನೆ ಬನಶಂಕರಿ 3ನೇತಿರುವಿನ ದೊಡ್ಡ ಹನುಮಂತಪ್ಪ ರಸ್ತೆ, ಹರಿಗೆ ಬಡಾವಣೆ, ಸಹ್ಯಾದ್ರಿ ನಗರ, ಮಾಚೇನಹಳ್ಳಿ ಜಯಂತಿ ಗ್ರಾಮ, ಟಿಪ್ಪು ನಗರದಲ್ಲಿಸೋಂಕು ಕಾಣಿಸಿಕೊಂಡಿದೆ. ಆ‍ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು. ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ಹಲವು ನಿರ್ಬಂಧಗಳನ್ನು ಕಟ್ಟಿನಿಟ್ಟಾಗಿ ಜಾರಿಮಾಡಲಾಗುತ್ತಿದೆ.

ಇಬ್ಬರಿಗೆ ಸೋಂಕು (ತೀರ್ಥಹಳ್ಳಿ ವರದಿ):

ತಾಲ್ಲೂಕಿನಲ್ಲಿ ಗುರುವಾರ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕುಇರುವುದು ದೃಢಪಟ್ಟಿದೆ.ಕಳ್ಳಿಗದ್ದೆ ಗ್ರಾಮದ 29 ವರ್ಷದ ಮಹಿಳೆ ಹಾಗೂ ಬೆಂಗಳೂರಿನಿಂದ ತೀರ್ಥಹಳ್ಳಿ ಪಟ್ಟಣ ಸಮೀಪ ಬುಕ್ಲಾಪುರ ಗ್ರಾಮದ 23 ವರ್ಷದ ಮಹಿಳೆಗೆ ಸೋಂಕು ತಗಲಿದೆ.

ಚಿಕ್ಕಜೇನಿಯಲ್ಲೂ ಸೋಂಕು (ರಿಪ್ಪನ್ ಪೇಟೆ ವರದಿ): ಸಮೀಪದ ಚಿಕ್ಕಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೀರೆಜೇನಿ ಗ್ರಾಮದ ಮಜರೆ ಕಾರೆಮಟ್ಟಿ ವಾಸಿ 24 ವರ್ಷದ ಯುವಕನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅವರು ಈಚೆಗೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದರು. ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಶಿವಮೊಗ್ಗದ ಕೋವಿಡ್ ಕೇಂದ್ರಕ್ಕೆ ಕರೆದಿಕೊಂಡು ಹೋದರು.ಅವರಕುಟುಂಬದ ಸದಸ್ಯರನ್ನುಕೊರಂಟೈನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT