ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಸೋಂಕಿತರಿಗೆ ಮನೆಗಳಲ್ಲೇ ಚಿಕಿತ್ಸೆ

223 ಮಂದಿಗೆ ಕೊರೊನಾ ಸೋಂಕು ದೃಢ, 147 ಜನರು ಗುಣಮುಖ, 7 ಜನರ ಸಾವು
Last Updated 2 ಸೆಪ್ಟೆಂಬರ್ 2020, 15:17 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗಿಂತ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ.

ಮನೆಯಲ್ಲಿ 1,071 ಜನರು ಸೇರಿ ಒಟ್ಟು 1,871 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಸದಸ್ಯ ಸೇರಿ ಬುಧವಾರ 223 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.147 ಜನರು ಗುಣಮುಖರಾಗಿದ್ದಾರೆ. 7 ಜನರುಮೃತಪಟ್ಟಿದ್ದಾರೆ.

ಒಂದೇ ದಿನ 1,249 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, 938 ಜನರ ವರದಿ ನೆಗೆಟಿವ್ ಬಂದಿದೆ. ಇದುವರೆಗೆ ಕೊರೊನಾದಿಂದ ಜೀವ ಕಳೆದುಕೊಂಡವರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

ಸೋಂಕು ಪತ್ತೆಯಾದವರಲ್ಲಿ ಶಿವಮೊಗ್ಗ ನಗರದವರೇ 128 ಜನರು ಇದ್ದಾರೆ. ಭದ್ರಾವತಿ ತಾಲ್ಲೂಕಿನಲ್ಲಿ 26, ಶಿಕಾರಿಪುರದಲ್ಲಿ 28, ಸಾಗರದಲ್ಲಿ 11, ಸೊರಬದಲ್ಲಿ 7, ಹೊಸನಗರದಲ್ಲಿ 12, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 5 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದ 6 ಜನರಿಗೆ ಸೋಂಕು ಪತ್ತೆಯಾಗಿದೆ.

ತಾ.ಪಂ ಉಪಾಧ್ಯಕ್ಷನಿಗೆ ಸೋಂಕು (ಸಾಗರ ತಾಲ್ಲೂಕು ವರದಿ):ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷನಿಗೆ ಸೇರಿ 11 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 318 ಕ್ಕೆ ಏರಿದ್ದು 198 ಮಂದಿ ಗುಣಮುಖರಾಗಿದ್ದರೆ 9 ಮಂದಿ ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷನಿಗೆ ಕೊರೊನಾ ಸೋಂಕು ಹಿನ್ನೆಲೆತಾ.ಪಂ.ಕಚೇರಿಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲಾಗಿದೆ.

26 ಜನರಿಗೆ ಪಾಸಿಟಿವ್ (ಭದ್ರಾವತಿ ವರದಿ):6 ಮಂದಿ ಮಹಿಳೆಯರು ಸೇರಿದಂತೆ 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹುತ್ತಾ ಕಾಲೊನಿ ಭಾಗದಲ್ಲಿ ಎರಡು ಪ್ರಕರಣ ಸೇರಿದಂತೆ ಕಾಗದನಗರ, ಹಳೇ ಜೇಡಿಕಟ್ಟೆ, ವಿಜಯನಗರ, ಹೊಸಮನೆ, ಗಾಂಧಿನಗರ, ಗೌಳಿಗರಬೀದಿ ಭಾಗದಲ್ಲಿ ಕೆಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

28 ಮಂದಿಗೆ ಸೋಂಕು (ಶಿಕಾರಿಪುರ ವರದಿ):
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 28 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಶುಶ್ರೂಷಕಿಗೆ, ಶಿವಮೊಗ್ಗ ರಸ್ತೆ ನಿವಾಸಿಗಳಾದ ಮೂವರು ಪುರುಷರಿಗೆ, ಒಬ್ಬ ಮಹಿಳೆಗೆ, ಬಾಲಕ, ಬಾಲಕಿಗೆ, ಪಿಡಬ್ಲೂಡಿ ಕ್ವಾರ್ಟಸ್ ಮಹಿಳೆಗೆ, ಹಳೇ ಹೊನ್ನಾಳಿ ರಸ್ತೆಯ ಮಹಿಳೆಗೆ, ಮಂಡಿಪೇಟೆಯ ಮಹಿಳೆಗೆ, ಕಂಚುಗಾರರಕೇರಿಯಲ್ಲಿ ಮಹಿಳೆಗೆ, ಶಿರಾಳಕೊಪ್ಪ ಪಟ್ಟಣದಲ್ಲಿ ನಾಲ್ವರು ಪುರುಷರಿಗೆ, ಒಬ್ಬ ಮಹಿಳೆಗೆ, ಅಂಬಾರಗೊಪ್ಪನ ಪುರುಷನಿಗೆ, ತುಮರಿಹೊಸೂರಿನ ಪುರುಷನಿಗೆ, ಬೇಗೂರಿನ ಪುರುಷನಿಗೆ, ಬಳ್ಳಿಗಾವಿಯ ಮಹಿಳೆಗೆ, ಹಿತ್ತಲದಲ್ಲಿ ಇಬ್ಬರು ಮಹಿಳೆಯರಿಗೆ, ಬೆಂಡೆಕಟ್ಟೆಯಲ್ಲಿ ಪುರುಷನಿಗೆ, ಬಳ್ಳೂರು ಪುರುಷನಿಗೆ, ಅಂಬ್ಲಿಗೊಳ್ಳ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT