ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿ ಅರ್ಧದಷ್ಟು ಕಡಿತ

ಗಡಿ ಮರುವಿನ್ಯಾಸಕ್ಕೆ ಕೇಂದ್ರದ ವನ್ಯಜೀವಿ ಮಂಡಳಿ ಒಪ್ಪಿಗೆ
Published : 10 ಫೆಬ್ರುವರಿ 2025, 7:40 IST
Last Updated : 10 ಫೆಬ್ರುವರಿ 2025, 7:40 IST
ಫಾಲೋ ಮಾಡಿ
Comments
‘ಉಬ್ರಾಣಿ ಮೀಸಲು ಅರಣ್ಯ ಪ್ರದೇಶವನ್ನೂ ಸೇರಿಸಲಿ’
ಮಿತಿ ನಿಗದಿಗೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಸಂರಕ್ಷಿತ ಪ್ರದೇಶದ ವ್ಯಾಪ್ತಿ ಕಡಿತಗೊಳಿಸಿದರೆ ಅಷ್ಟೇ ಪ್ರಮಾಣದ ಭೂಮಿಯನ್ನು ಮತ್ತೆ ಅಲ್ಲಿಗೆ ಸೇರಿಸಬೇಕು. ಅದರಂತೆ ಕುಕ್ಕವಾಡ ಉಬ್ರಾಣಿ ಭಾಗದ 279.4 ಚದರ ಕಿ.ಮೀ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶವನ್ನು ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಲು ಸರ್ಕಾರ ಮುಂದಾಗಲಿ. ಅಖಿಲೇಶ್ ಚಿಪ್ಪಳಿ ಪರಿಸರ ಹೋರಾಟಗಾರ ಸಾಗರ
‘ಅಭಯಾರಣ್ಯದ ಕೀಲಿ ತೆರೆದಂತಾಗಿದೆ’
‘ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಮಾನವ–ಪ್ರಾಣಿಗಳ ನಡುವಿನ ಸಂಘರ್ಷ ಈಗಾಗಲೇ ಹೆಚ್ಚಾಗಿದೆ. ಆನೆ ಚಿರತೆಗಳು ಜನವಸತಿಯತ್ತ ಲಗ್ಗೆ ಇಡುತ್ತಿವೆ. ಈಗ ಅಭಯಾರಣ್ಯದ ವ್ಯಾಪ್ತಿ ಕಡಿಮೆ ಆದರೆ ಈ ಸಂಘರ್ಷ ತಾರಕಕ್ಕೇರಲಿದೆ’ ಎಂದು ಪರಿಸರಾಸಕ್ತ ಶಿವಮೊಗ್ಗದ ಎನ್‌.ಕೆ.ವಾಸುದೇವ ಆತಂಕ ವ್ಯಕ್ತಪಡಿಸಿದರು. ‘ಪರಿಸರ ಸೂಕ್ಷ್ಮವಲಯ ಎಂಬ ಕಾರಣಕ್ಕೆ ಗಣಿಗಾರಿಕೆ ನಗರೀಕರಣ ಹಾಗೂ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಇಲ್ಲಿಯವರೆಗೂ ಒಂದಷ್ಟು ಕಡಿವಾಣ ಇತ್ತು. ಈಗ ಅಭಯಾರಣ್ಯದ ಕೀಲಿ ತೆರೆದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT