ಭಾನುವಾರ, ಆಗಸ್ಟ್ 1, 2021
27 °C

ಶಿವಮೊಗ್ಗ: ಎಸಿಬಿ ಬಲೆಗೆ ದೇವರಾಜ ಅರಸು ನಿಗಮದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರೊಬ್ಬರ ಬಳಿ ಲಂಚ ಪಡೆಯುತ್ತಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದಿದ್ದಾರೆ.

ಕಚೇರಿಯ ಕಡತ ನಿರ್ವಾಹಕಿ ಎಂ.ಎಸ್.ಸುನೀತಾ ಎಸಿಬಿ ಬಲೆಗೆ ಬಿದ್ದವರು. 

ಶಿಕಾರಿಪುರ ತಾಲ್ಲೂಕು ಬಗಣಕಟ್ಟೆಯ ರೈತ ಮಲ್ಲೇಶಪ್ಪ ತಮ್ಮ ಪತ್ನಿ ಎಂ.ಸಾವಿತ್ರಮ್ಮ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ₹ 1ಲಕ್ಷ ಸಾಲಕ್ಕಾಗಿ 2018ರಲ್ಲಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿತ್ರಮ್ಮ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ್ದು ಅದನ್ನು ಅನುಮೋದನೆಗೆ ಕಳುಹಿಸಲು ಸುನೀತಾ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಎಸಿಬಿ ಡಿವೈಎಸ್‌ಪಿ ಲೋಕೇಶ್ ಮತ್ತವರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದಿದೆ. ಈ ಪ್ರಕರಣದ ಪರಿಣಾಮ ನಿಗಮದಲ್ಲಿ ಬಾಕಿ ಇದ್ದ ಎಲ್ಲ 40 ಅರ್ಜಿಗಳನ್ನೂ ತ್ವರಿತವಾಗಿ  ವಿಲೇವಾರಿ ಮಾಡುವಂತೆ ಎಸಿಬಿ ಪೊಲೀಸರು ತಾಕೀತು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು