ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮರಿಗಳ ಸಂತತಿ ವೃದ್ಧಿಗೆ ಮೀನುಗಾರರ ಸಹಕಾರ ಅತ್ಯಗತ್ಯ

Published 29 ಡಿಸೆಂಬರ್ 2023, 12:54 IST
Last Updated 29 ಡಿಸೆಂಬರ್ 2023, 12:54 IST
ಅಕ್ಷರ ಗಾತ್ರ

ಸಾಗರ: ಮೀನು ಮರಿಗಳ ಸಂತತಿ ವೃದ್ಧಿ ಸಮಯದಲ್ಲಿ ಮೀನುಗಾರಿಕೆ ಮಾಡದಿರುವ ಮೂಲಕ ಮೀನುಗಾರರು ಅವುಗಳ ಸಂತತಿ ವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದರು.

ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲಿನ ಶರಾವತಿ ಹಿನ್ನೀರಿಗೆ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ, ಮೀನುಗಾರರ ಸುರಕ್ಷತೆಗೆ ಲೈಫ್ ಜಾಕೆಟ್, ಬಲೆಗಳು ಹಾಗೂ ಅಗತ್ಯ ಪರಿಕರಗಳನ್ನು ಗುರುವಾರ ವಿತರಿಸಿ ಮಾತನಾಡಿದರು.

ಮೀನಿನ ಮರಿಗಳು ಬೆಳವಣಿಗೆಯಾಗುವ ತನಕ ಯಾವ ನಿಯಮಗಳನ್ನು ಪಾಲಿಸಬೇಕು ಎನ್ನುವ ಕುರಿತು ಮೀನುಗಾರಿಕಾ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಮೀನುಗಾರರು ತಪ್ಪದೇ ಪಾಲಿಸಬೇಕು. ಹಾಗಾದಲ್ಲಿ ಮಾತ್ರ ಮೀನುಗಾರಿಕೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಈ ವರ್ಷ 9 ಲಕ್ಷ ಮೀನು ಮರಿಗಳನ್ನು ಬಿಡಲು ಚಾಲನೆ ನೀಡಲಾಗಿದೆ. ಇದರ ಜೊತೆಗೆ ಮೀನುಗಾರರ ಸುರಕ್ಷತೆಗೆ ಸಂಬಂಧಿಸಿದಂತೆ 40 ಫಲಾನುಭವಿಗಳಿಗೆ ತಲಾ ₹ 10 ಸಾವಿರ ಮೌಲ್ಯದ ಸುರಕ್ಷತಾ ಪರಿಕರಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಸತೀಶ್, ಸಹಾಯಕ ನಿರ್ದೇಶಕ ತಿಮ್ಮಪ್ಪ ಎಂ.ಎಚ್., ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಚೇತನ್ ರಾಜ್ ಕಣ್ಣೂರು, ಸೋಮಶೇಖರ್ ಲ್ಯಾವಿಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT