ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕುವೆಂಪು ವಿವಿಯಲ್ಲಿ ನಾಳೆ ವಿಭಿನ್ನ ಘಟಿಕೋತ್ಸವ

ಮುದ್ರಿತ ವೀಡಿಯೊ ಮೂಲಕ ಘಟಿಕೋತ್ಸವ ಭಾಷಣ, ಆನ್‌ಲೈನ್ ಮೂಲಕ ವೀಕ್ಷಣೆ
Last Updated 27 ಜುಲೈ 2020, 13:13 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋವಿಡ್‌ ಸಂಕಷ್ಟದ ಮಧ್ಯೆಕೆಲವೇ ಗಣ್ಯರ ಸಮ್ಮುಖದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ಆಯೋಜಿಸಲಾಗಿದೆ.

ಜ್ಞಾನಸಹ್ಯಾದ್ರಿ ಕ್ಯಾಂಪಸ್‌ನ ಸಭಾಂಗಣದಲ್ಲಿಜುಲೈ 29ರಂದು ಬೆಳಿಗ್ಗೆ 11ಕ್ಕೆ ನಡೆಯುವಘಟಿಕೋತ್ಸವದಲ್ಲಿ ಗಣ್ಯರು, ಸಿಂಟಿಕೇಟ್‌ ಸದಸ್ಯರು,ಹೆಚ್ಚಿನ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳೂಸೇರಿ 100ರ ಒಳಗೆ ಸಭಿಕರು ಹಾಜರಿರುವರು. ಉಳಿದವರು ಆನ್‌ಲೈನ್‌, ವೆಬ್‌ನಾರ್ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಬಾರಿಯ ಘಟಿಕೋತ್ಸವಕ್ಕೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು, ಘಟಿಕೋತ್ಸವ ಭಾಷಣ ಮಾಡಬೇಕಾದ ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕಲಪತಿ ಪಿ.ವಿ.ಕೃಷ್ಣ ಭಟ್‌ ಸಹ ಬರುತ್ತಿಲ್ಲ. ಅವರು ಕಳುಹಿಸಿರುವ ಭಾಷಣದ ವೀಡಿಯೊ ಸಂದೇಶವನ್ನೇ ಘಟಿಕೋತ್ಸವದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದರು.

ಈ ಬಾರಿ 9,443 ಪುರುಷರು, 14,289 ಮಹಿಳೆಯರು ಸೇರಿ ಒಟ್ಟು 23,732 ವಿದ್ಯಾರ್ಥಿಗಳುಪದವಿಗೆ ಅರ್ಹರಾಗಿದ್ದಾರೆ.140 ಪುರುಷರು, 54 ಮಹಿಳೆಯರು ಸೇರಿದಂತೆ 194 ಅಭ್ಯರ್ಥಿಗಳಿಗೆಪಿಎಚ್‌.ಡಿಪ್ರಧಾನ ಮಾಡಲಾಗುತ್ತಿದೆ.ಘಟಿಕೋತ್ಸವದಲ್ಲಿ 119 ಸ್ವರ್ಣ ಪದಕಗಳನ್ನು ವಿತರಿಸಲಾಗುತ್ತಿದೆ. ಅವುಗಳನ್ನು 54 ಮಹಿಳೆಯರು, 13 ಪುರುಷರು ಸೇರಿ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ನಾಲ್ವರುಪುರುಷರು,15 ಮಹಿಳೆಯರು ಸೇರಿ 19 ವಿದ್ಯಾರ್ಥಿಗಳು24 ನಗದು ಬಹುಮಾನ ಪಡೆದಿದ್ದಾರೆ. ಇದರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ ಎಂದು ವಿವರ ನೀಡಿದರು.

ಹೆಚ್ಚು ಪದಕ ಪಡೆದ ವಿದ್ಯಾರ್ಥಿಗಳು: ಕನ್ನಡಸ್ನಾತಕೋತ್ತರವಿಭಾಗದಲ್ಲಿ ಎಚ್.ರಂಗನಾಥ್10 ಸ್ವರ್ಣ ಪದಕ ಹಾಗೂ ಮೂರು ನಗದು ಬಹುಮಾನ,ಎಂ.ಆರ್.ಸಂಚಿತಾ(ಎಂಎಸ್ಸಿ ಜೈವಿಕ ತಂತ್ರಜ್ಞಾನ), ಬಿ.ಬಿ.ರುಕ್ಕಯ್ಯ (ಬಿ.ಕಾಂ), ತಲಾ 5 ಸ್ವರ್ಣ ಪದಕ ಪಡೆದಿರುತ್ತಾರೆ. ಎಚ್.ವಾಣಿ (ಸಮಾಜ ಶಾಸ್ತ್ರ,ಎಂಎ,) ಎನ್.ಜಿ.ಪೂಜಾ(ಎಂಎಸ್ಸಿ ಪರಿಸರ ವಿಜ್ಞಾನ), ಕೆ.ವಿ.ಅಮೃತಾ(ಎಂಬಿಎ), ತಲಾ 4 ಸ್ವರ್ಣ ಪದಕ ಪಡೆದಿರುತ್ತಾರೆ.ಸೀಮಾ ಎಸ್.ಡಿ. (ಎಂಎಸ್ಸಿ ಗಣಿತಶಾಸ್ತ್ರ) 3 ಪದಕ, 3 ನಗದು ಬಹುಮಾನ, ಎಂಸಿಎ ವಿಭಾಗದಲ್ಲಿ ಕೆ.ಆರ್.ಆಶ್ವಿನಿ 3 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದಿರುತ್ತಾರೆ. ಎಂಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಬಿ.ಎಂ.ನವೀನ, ಇತಿಹಾಸ ವಿಭಾಗದಲ್ಲಿ ಪಿ.ದೀಪ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಶಾಶ್ವತಿ 3 ಸ್ವರ್ಣ ಪದಕ ಪಡೆದಿದ್ದಾರೆ ಎಂದರು.

ಪಿಎಚ್‌.ಡಿಪಡೆದ194 ವಿದ್ಯಾರ್ಥಿಗಳಲ್ಲಿಕಲಾ ವಿಭಾಗ 80, ವಾಣಿಜ್ಯ ನಿಕಾಯ 13, ಶಿಕ್ಷಣ ನಿಕಾಯ 05, ಕಾನೂನು ನಿಕಾಯದಲ್ಲಿ 01, ವಿಜ್ಞಾನನಿಕಾಯದಲ್ಲಿ 93 ವಿದ್ಯಾರ್ಥಿಗಳುಇದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವ ಕಾರ್ಯಕ್ರಮ ವೀಕ್ಷಣೆಗಾಗಿ ಲೈವ್ ಸ್ಟ್ರೀಮಿಂಗ್ ಮತ್ತು ವೆಬಿನಾರ್ ವ್ಯವಸ್ಥೆ ಮಾಡಲಾಗಿದೆ.ರ್‍ಯಾಂಕ್‌ವಿಜೇತರು ಮತ್ತು ಪಿಎಚ್‌.ಡಿಪದವೀಧರರಿಗೆ ಹಾಗೂ ಪೋಷಕರಿಗೆ ಬೇರೆ ಬೇರೆ ಲಿಂಕ್‌ಜೋಡಿಸಲಾಗುವುದು. ಈಗಾಗಲೇ ಎಲ್ಲ ಪದವಿವಿದ್ಯಾರ್ಥಿಗಳಿಗೆ ಈ ಲಿಂಕ್‌ಕಳುಹಿಸಲಾಗಿದೆ ಎಂದರು.

ಸಭಾಂಗಣದ ಒಳಗೆ ಬರುವ ಎಲ್ಲರಿಗೂಮಾಸ್ಕ್‌ಮತ್ತು ಸ್ಯಾನಿಟೈಸರ್ ನೀಡಲಾಗುವುದು. ಥರ್ಮಲ್ ಟೆಸ್ಟ್ ನಂತರ ಒಳಗೆಬಿಡಲಾಗುವುದು. ಇಡೀ ಸಭಾಂಗಣವನ್ನೇ ಸ್ಯಾನಿಟೈಸರ್ ಮಾಡಲಾಗುತ್ತಿದೆಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಎನ್.ಎಸ್.ಪಾಟೀಲ್, ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ,ಸಾರ್ವಜನಿಕ ಸಂಪರ್ಕಾಧಿಕಾರಿಸತ್ಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT