ಶಿವಮೊಗ್ಗ:ಕೋವಿಡ್ಆರೈಕೆ ಕೇಂದ್ರಗಳಲ್ಲಿನಿಯೋಜಿಸಲಾಗಿರುವ ಆಯುರ್ವೇದಿಕ್ ವೈದ್ಯರು ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕಿದರೆ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ರಜೆ ಹಾಕಿರುವ ವೈದ್ಯರಿಗೆ ನೋಟಿಸ್‌ನೀಡಲಾಗುವುದು ಎಂದುಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದಜಿಲ್ಲಾ ಸರ್ವೇಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗಂಟಲುದ್ರವ ಸಂಗ್ರಹಿಸುವ ಕಾರ್ಯಕ್ಕೆ 19 ಸಂಚಾರಿ ತಂಡಗಳಿವೆ.ಪ್ರಾಥಮಿಕ ಆರೋಗ್ಯ ಕೇಂದ್ರ ಹಂತದಲ್ಲಿ 63 ತಪಾಸಣಾ ತಂಡಗಳಿವೆ. ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಗಂಟಲುದ್ರವ ಸಂಗ್ರಹಿಸುವ ಕಾರ್ಯ ಆರಂಭಿಸಬೇಕು. ಅದಕ್ಕಾಗಿ ಐದು ಸಂಚಾರಿ ತಂಡಗಳನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಗಂಟಲು ದ್ರವ ಪರೀಕ್ಷೆ ಹೆಚ್ಚಳ:

ಆರ್‌ಟಿಪಿಸಿಆರ್ ಮೂಲಕ ಪ್ರತಿದಿನ 1,200 ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದೆ.ಇದನ್ನು 1,500ಕ್ಕೆ ಹೆಚ್ಚಿಸಬೇಕು. ಇದೇ ರೀತಿ ಆರ್‌ಎಟಿ ಮೂಲಕ 600 ಪರೀಕ್ಷೆ ನಡೆಸಲಾಗುತ್ತಿದೆ.ಈ ವಿಧಾನದಲ್ಲೂ ದಿನಕ್ಕೆ1,200ತಲುಪಬೇಕು. ಪ್ರತಿದಿನ ಮೆಗ್ಗಾನ್ ಆಸ್ಪತ್ರೆಯಲ್ಲಿ 500, ವಿಡಿಆರ್‌ಎಲ್‍ನಲ್ಲಿ 500 ಪರೀಕ್ಷೆಯ ಗುರಿ ಸಾಧಿಸಬೇಕು. ಒಂದೆರಡು ದಿನಗಳಲ್ಲಿ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲೂಗಂಟಲುದ್ರವ ಪರೀಕ್ಷೆ ಆರಂಭವಾಗಲಿದೆ.ಅಲ್ಲಿಯೂ ಪ್ರತಿ ದಿನ 500 ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೋಂ ಕ್ವಾರೆಂಟೈನ್ ಹೆಚ್ಚಳ:

ಪ್ರಾಯೋಗಿಕವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಹೋಂ ಕ್ವಾರೆಂಟೈನ್ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಹೋಂ ಕ್ವಾರೆಂಟೈನ್‍ನಲ್ಲಿಇರುವ ಜನರಿಗೆ ಅಗತ್ಯವಿರುವ ಸಾಧನಗಳನ್ನು ಖಾತ್ರಿಪಡಿಸಿ, ನಿರಂತರ ಮೇಲ್ವಿಚಾರಣೆ ಮಾಡಬೇಕು. ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ತಪಾಸಣೆಗಾಗಿ ಆರಂಭಿಸಲಾಗಿರುವ ಟ್ರಯಾಜ್ ಕೇಂದ್ರಗಳಲ್ಲಿ ಸೂಕ್ತ ವ್ಯವ್ಯಸ್ಥೆ ಕಲ್ಪಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 6 ಮಂದಿ ಹಾಗೂ ನಗರ ಪ್ರದೇಶದಲ್ಲಿ10 ಮಂದಿ ಪ್ರಾಥಮಿಕ ಸೋಂಕಿತರನ್ನು ಗುರುತಿಸಿ ಅವರ ಮೇಲೆ ನಿಗಾ ಇರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿಸಿಇಒಎಂ.ಎಲ್.ವೈಶಾಲಿ, ಶಿವಮೊಗ್ಗ ವೈದ್ಯಕೀಯ ಕಾಲೇಜುನಿರ್ದೇಶಕ ಡಾ.ಸಿದ್ದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.