ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ.ಗು.ಹಳಕಟ್ಟಿ ಅವರ ಅಪ್ರತಿಮ ಸಾಧನೆ ಅನನ್ಯ: ನೀಲಲೋಚನ ಹಾಲಪ್ಪ

Published 5 ಜುಲೈ 2023, 5:07 IST
Last Updated 5 ಜುಲೈ 2023, 5:07 IST
ಅಕ್ಷರ ಗಾತ್ರ

ಶಿವಮೊಗ್ಗ: ವಚನ ಸಾಹಿತ್ಯ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಅಪ್ರತಿಮ ಸಾಧನೆ ಅನನ್ಯ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಶರಣೆ ನೀಲಲೋಚನ ಹಾಲಪ್ಪ ಹೇಳಿದರು.

ಇಲ್ಲಿನ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿ ಅವರ ಸಂಸ್ಮರಣೆ ಹಾಗೂ ಶರಣ ಡಾ.ಫ.ಗು. ಹಳಕಟ್ಟಿ ಅವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರತಿಯೊಬ್ಬರ ಜೀವನದಲ್ಲಿಯೂ ಸಮರ್ಥ ಗುರುವಿನ ಮಾರ್ಗದರ್ಶನ ಬೇಕು. ಗುರುವಾದವರು ನಮ್ಮ ಭವ ಬಂಧನದ ಸಂಕೋಲೆಯನ್ನು ಕಳೆಯುತ್ತಾರೆ. ಅಂತಹ ಭವಬಂಧನ ಕಳೆಯುವಂತಹ ಪವಿತ್ರ ಕಾರ್ಯವನ್ನು ಲಿಂಗಾನಂದ ಸ್ವಾಮೀಜಿ ಅವಿಶ್ರಾಂತವಾಗಿ ನಡೆಸಿಕೊಂಡು ಬಂದಿದ್ದರು’ ಎಂದರು.

‘ಡಾ.ಫ.ಗು. ಹಳಕಟ್ಟಿ ಅವರ ಜಯಂತ್ಯುತ್ಸವವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಸ್ಮರಣೀಯ ಕಾರ್ಯ’ ಎಂದು ಬಸವದಳ ಟ್ರಸ್ಟ್ ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ ಹೇಳಿದರು.

ಬಸವದಳ ಟ್ರಸ್ಟ್ ಅಧ್ಯಕ್ಷ ಶರಣ ರಾಮಪ್ಪ, ಗೌರವಾಧ್ಯಕ್ಷ ಶರಣ ಹಾಲಪ್ಪ, ವಿಶ್ರಾಂತ ಸಹಾಯಕ ಎಂಜಿನಿಯರ್ ಎ.ಸಿ.ಮೂಲಿಮನಿ, ಜ್ಞಾನಮೂರ್ತಿ, ಶಾಂತಮ್ಮ, ಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT