ಹೊಳೆಹೊನ್ನೂರು: ಕಳೆದ ಒಂದೂವರೆ ತಿಂಗಳಿಂದ ನಿರಂತರ ಜ್ಯೋತಿ ಯೋಜನೆ ವಿದ್ಯುತ್ ನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಜೆ.ಇ. ಹರೀಶ್ ನಾಯ್ಕ ರವರನ್ನು ಸೈದರಕಲ್ಲಹಳ್ಳಿ ರೈತರು ತರಾಟೆ ತೆಗೆದುಕೊಂಡರು.

ಅವರು ಸಮೀಪದ ಆನವೇರಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಲಿಂಕ್ ಲೈನ್ ಯೋಜನೆಯಡಿ ಕರೆಂಟ್ ಕಂಬಗಳನ್ನು ಹಾಕುವ ನೆಪವೊಡ್ಡಿ ಒಂದೂವರೆ ತಿಂಗಳಿಂದ ಬೆಳಿಗ್ಗೆ 10 ಗಂಟೆ ಯಿಂದ ರಾತ್ರಿ 10 ಗಂಟೆವರೆಗೂ ವಿದ್ಯುತ್ ವಿತಸಲಾಗುತ್ತಿಲ್ಲ. ವಿದ್ಯುತ್ ಕುಂಟಿತದಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗುತ್ತಿದ್ದು, ಇದರಿಂದ ಮಕ್ಕಳಿಗೆ ಓದಲು, ಬರೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೂ ನೀರು ಅವಶ್ಯಕತೆಯಿದ್ದು, ಸಮರ್ಪಕ ವಿದ್ಯುತ್ ಇಲ್ಲದೇ ಇರುವುದರಿಂದ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮೌಖಿಕವಾಗಿ ಜೆಇ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಆದ್ದರಿಂದ ಇವರನ್ನು ಕೂಡಲೇ ವರ್ಗಾಯಿಸಿ ಬೇರೆ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ರೈತ ದೇವರಾಜ್, ಸೈದರಕಲ್ಲಹಳ್ಳಿ ಗ್ರಾಮಕ್ಕೆ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ 2 ಎಕರೆ ಭೂಮಿ ನೀಡಿ ಸುಮಾರು ವರ್ಷಗಳೇ ಕಳೆದರು ಸ್ಥಾಪನೆಯ ಬಗ್ಗೆ ಯಾವ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ. ವಿತರಣಾ ಕೇಂದ್ರ ಸ್ಥಾಪನೆ ಮಾಡಲು ಸಾಧ್ಯವಿಲ್ಲದಿದ್ದರೆ ರೈತನಿಗೆ ವಾಪಸ್ಸು ಜಮೀನು ನೀಡಬೇಕೆಂದು ಆಗ್ರಹಿಸಿದರು.

ಭದ್ರಾವತಿ ತಾಲ್ಲೂಕಿನ ಕೊನೆ ಗ್ರಾಮವಾಗಿದ್ದರಿಂದ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಿದೆ. ವಿದ್ಯುತ್ ಇಲ್ಲದೇ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂಬುದಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಬೂಬು ಹೇಳುತ್ತಾರೆ. ಈ ಹಿಂದಿನಿಂದಲೂ ನಮ್ಮ ಗ್ರಾಮದ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಯಾವುದೇ ಹಳೆಯ ಕಂಬದಲ್ಲಿ ವೈರ್ ಕಟ್ ಆಗಿರುವ ಫೋಟೋ ವಾಟ್ಸಪ್ ಗ್ರೂಪ್ನಲ್ಲಿ ಕಳಿಸಿ ಬೇಕಾಬಿಟ್ಟಿ ಕರೆಂಟ್ ತೆಗೆದು ರೈತರಿಗೆ ಗ್ರಾಮಸ್ಥರಿಗೆ ತುಂಬ ತೊಂದರೆ ಕೊಡುತ್ತಿದ್ದಾರೆ. ಈ ಸಮಸ್ಯೆಯನ್ನು ಕೇಳಲು ಕಚೇರಿಗೆ ಬಂದರೆ ಇಲ್ಲಿನ ಜೆಇಯವರು ಯಾವುದೇ ರೀತಿಯ ಸ್ಪಂದನೆ ಇಲ್ಲ. ಹಾರಿಕೆ ಉತ್ತರ ನೀಡುತ್ತಾರೆ. ಇವರ ಬೇಜಾಬ್ದಾರಿ ತನಕ್ಕೆ ಸಾಕಷ್ಟು ರೋಷಿ ಹೋಗಿದ್ದು, ಕೂಡಲೇ ಇವರನ್ನು ವರ್ಗಾಯಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹರೀಶ್, ನಾಗರಾಜಪ್ಪ, ಹನುಮಂತಪ್ಪ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.