ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬೈಕ್‌ ಓಡಿಸಿದ ಬಾಲಕ: ತಂದೆಗೆ ₹ 25 ಸಾವಿರ ದಂಡ

Last Updated 9 ನವೆಂಬರ್ 2022, 6:59 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಲಕನಿಗೆ ಬೈಕ್ ಓಡಿಸಲು ಕೊಟ್ಟ ತಂದೆಗೆ ತೀರ್ಥಹಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಕಳೆದ ಅಕ್ಟೋಬರ್‌ 18ರಂದು ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕ ಬೈಕನ್ನು ಹೆಲ್ಮೆಟ್ ಧರಿಸದೇ ಮತ್ತು ವಾಹನ ಚಾಲನಾ ಪರವಾನಗಿ ಹೊಂದಿರದೇ ಚಾಲನೆ ಮಾಡಿ ಸಂಚಾರ ನಿಯಮ
ಉಲ್ಲಂಘಿಸಿದ್ದ.

ಬಾಲಕನಿಗೆ ಬೈಕ್ ನೀಡಿ ಚಾಲನೆ ಮಾಡಲು ಅವಕಾಶ ನೀಡಿದ್ದ ಆತನ ತಂದೆ ಆಸಿಫ್ ಭಾಷಾ (46) ವಿರುದ್ಧ ಪ್ರಕರಣ ದಾಖಲಿಸಿದ್ದ ತೀರ್ಥಹಳ್ಳಿ ನಗರ ಠಾಣೆ ಪೊಲೀಸರು, ಆ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಮಾಲೀಕರಾದ ಬಾಲಕನ ತಂದೆಗೆ ದಂಡ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT