ಗುರುವಾರ , ನವೆಂಬರ್ 26, 2020
21 °C

ಶಿವಮೊಗ್ಗ: ವರ್ಷದ ನಂತರ ವಿಮಾನ ಹಾರಾಟ, ಸಿಎಂ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ 2022ರ ಡಿಸೆಂಬರ್  ಒಳಗೆ ಪೂರ್ಣಗೊಳ್ಳಲಿದೆ. 2022ರ ಫೆಬ್ರುವರಿಗೆ ವಿಮಾನ ಹಾರಾಟ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಮಾನ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. 2,050 ಮೀಟರ್ ರನ್‌ವೇ 3,200 ಮೀಟರ್‌ಗಳಿಗೆ ಹೆಚ್ವಿಸಲಾಗಿದೆ. ಇದರಿಂದ ಏರ್‌ಬಸ್ ಇಳಿಯಲು ಇದು ಅನುಕೂಲವಾಗಲಿದೆ. ಅದಕ್ಕೆ ಬೇಕಾದ ₹ 75 ಕೋಟಿ ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಮಾಹಿತಿ ನೀಡಿದರು.

ಉಡಾಣ್ ಯೋಜನೆ ಕಾರಣ ಪ್ರಯಾಣ ವೆಚ್ಚ ಕಡಿಮೆ ಇರಲಿದೆ. ಸಾಮಾನ್ಯ ಜನರೂ ವಿಮಾನಯಾನ ಮಾಡಬಹುದು. ಜಿಲ್ಲೆಯ ಸಮಗ್ರ ಅಭಿವದ್ಧಿಗೆ ಅನುಕೂಲವಾಗಲಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು