ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ: ದರ್ಶನ ಪಡೆದ ಭಕ್ತರು

ಶ್ರದ್ಧಾ–ಭಕ್ತಿಯಿಂದ ಗಣೇಶ ಹಬ್ಬ ಆಚರಣೆ
Published : 8 ಸೆಪ್ಟೆಂಬರ್ 2024, 16:21 IST
Last Updated : 8 ಸೆಪ್ಟೆಂಬರ್ 2024, 16:21 IST
ಫಾಲೋ ಮಾಡಿ
Comments

ಶಿವಮೊಗ್ಗ: ಜಿಲ್ಲೆಯಾದ್ಯಂತ ಶನಿವಾರ ಗೌರಿ–ಗಣೇಶ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ನಗರದ ಸೈನ್ಸ್‌ ಮೈದಾನದಲ್ಲಿ ಗಣಪತಿ ಮೂರ್ತಿಗಳನ್ನು ಖರೀದಿಸಿ, ಟ್ರ್ಯಾಕ್ಟರ್‌ಗಳಲ್ಲಿ ಇರಿಸಿಕೊಂಡು ಪಟಾಕಿಗಳನ್ನು ಸಿಡಿಸುತ್ತಾ, ಡೊಳ್ಳು, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ ಮಾಡುವ ಸ್ಥಳಗಳಿಗೆ ತೆಗೆದುಕೊಂಡು ಬಂದರು. ಜೈಕಾರ ಮುಗಿಲು ಮುಟ್ಟಿತ್ತು.

ಗಣಪತಿಗಳನ್ನು ಕೂರಿಸುವ ಮಂಟಪಗಳನ್ನು ಬಣ್ಣ– ಬಣ್ಣದ ಕಾಗದ, ಅಲಂಕೃತ ದೀಪಗಳು, ಕಬ್ಬು, ಬಾಳೆ ದಿಂಡು, ತಳಿರು ತೋರಣಗಳಿಂದ ಶೃಂಗರಿಸಿ ಗಣಪನ ನಾನಾ ಬಗೆಯ ಮೂರ್ತಿಗಳನ್ನು ಇರಿಸಿದರು. ಮೋದಕ, ಕರಿಗಡುಬು ನೈವೇದ್ಯ ಹಿಡಿದು, ಪೂಜೆ ಸಲ್ಲಿಸಿ, ಆರತಿ ಬೆಳಗಿ ಭಕ್ತಿಯನ್ನು ಸರ್ಮಪಣೆ ಮಾಡಿದರು. 

ಶ್ರೀ ಸರ್ವ ಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಗಣೇಶ ಮೂರ್ತಿ ಕೂರಿಸಿರುವುದು. 
ಶ್ರೀ ಸರ್ವ ಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಗಣೇಶ ಮೂರ್ತಿ ಕೂರಿಸಿರುವುದು. 

ಗಣಪನ ಭಕ್ತರು ರಾತ್ರಿ ವೇಳೆ ಕುಟುಂಬ ಸಮೇತರಾಗಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ವಿಘ್ನನಿವಾರಕನ ಮೂರ್ತಿಗಳ ದರ್ಶನ ಪಡೆದರು. ನಗರದಲ್ಲಿ ಸಾರ್ವಜನಿಕವಾಗಿ ಹಲವು ಪ್ರದೇಶಗಳಲ್ಲಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಯಾವುದೇ ಅಹಿತಕತರ ಘಟನೆ ನಡೆಯುದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್‌ ಇಲಾಖೆ ವತಿಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. 

ಶಿವಮೊಗ್ಗದ ವಿದ್ಯಾನಗರದಲ್ಲಿ ವಿದ್ಯಾಗಣಪತಿ ಮೂರ್ತಿಯನ್ನು ಕೂರಿಸಿರುವುದು. 
ಶಿವಮೊಗ್ಗದ ವಿದ್ಯಾನಗರದಲ್ಲಿ ವಿದ್ಯಾಗಣಪತಿ ಮೂರ್ತಿಯನ್ನು ಕೂರಿಸಿರುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT