ಶಿವಮೊಗ್ಗ: ನಗರದಲ್ಲಿ ಸಂಜೆ ಸುರಿದ ಮಳೆಗೆ ಮಿಳಘಟ್ಟದಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.

ರಾಜಣ್ಣ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದರಿಂದ, ಮನೆಗೆ ಹಾನಿಯಾಗಿದೆ. ಇನ್ನು ವಿದ್ಯುತ್ ತಂತಿ ತುಂಡಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಆನಂದಪುರದಲ್ಲಿ ಜೋರು ಮಳೆಯಾಗಿದ್ದು, ಹೆದ್ದಾರಿ ಮೇಲೆ ಮರ ಉರುಳಿ ಬಿದ್ದಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಸಿಡಿಲು ಬಡಿದು
ತೆಂಗಿನ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ.

ರಿಪ್ಪನ್‌ಪೇಟೆ ಸಾಗರ ರಸ್ತೆಯ ವಿನಾಯಕ ನಗರದಲ್ಲಿ ಬೃಹತ್ ಗಾತ್ರದ ಮರಬಿದ್ದು ಅಂಗಡಿ ಮಳಿಗೆಗೆ ಹಾನಿಯಾಗಿದೆ. ಸಾಗರ ತೀರ್ಥಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯಾಯಿತು. ತಕ್ಷಣವೇ ನಾಗರಿಕರು, ರಕ್ಷಣಾ ಇಲಾಖೆಯ ಸಿಬ್ಬಂದಿ ಸೇರಿ ಮರ ತೆರವುಗೊಳಿಸಿದರು.

ಗೌತಮಪುರದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ರಿಪ್ಪನ್‍ಪೇಟೆ ಸುತ್ತಮುತ್ತ ಮಂಗಳವಾರ ಆಲಿಕಲ್ಲು ಮಳೆಯಾಗಿದೆ. ಜೋರು ಮಳೆ ಮತ್ತು ಗಾಳಿಯ ರಭಸಕ್ಕೆ ವಿವಿಧೆಡೆ ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.