ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಭೂಕುಸಿತ: ಸ್ಥಳ ತೊರೆಯಲು ಸೂಚನೆ

ಕಾರ್ಗಲ್: ಶರಾವತಿ ಹಿನ್ನೀರಿನ ಪ್ರದೇಶಗಳಾದ ನಂದೋಡಿ, ಆರೋಡಿ ಮತ್ತು ಮಂಡವಳ್ಳಿಯಲ್ಲಿ ಬೆಟ್ಟ ಕುಸಿಯುವ ಸ್ಥಿತಿ ಇದ್ದು, ತಕ್ಷಣವೇ ಜನರು ಸ್ಥಳ ತೊರೆಯಬೇಕು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಎಚ್ಚರಿಸಿದರು.
ಇಲ್ಲಿಗೆ ಸಮೀಪದ ನಂದೋಡಿಯ ಬೃಹತ್ ಬೆಟ್ಟದ ಸಾಲುಗಳು ಕುಸಿದು, ಹಾನಿಯಾಗಿರುವ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳ ತೊರೆಯುವ ಜನರಿಗೆ ಪುನ ರ್ವಸತಿ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ರಾಜ್ಯದ ಪ್ರಮುಖ ಭೂ ವಿಜ್ಞಾನಿಗಳ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈಗಾಗಲೇ ಹಲವು ಗುಡ್ಡಗಳು ಕುಸಿದಿವೆ. ಕೆಲವು ಬಿರುಕು ಬಿಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಬೆಟ್ಟಗಳು ಕುಸಿಯುವ ಸಾಧ್ಯತೆ ಇದೆ. ಇದು ಅತ್ಯಂತ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಿವಮೊಗ್ಗ | ಬೆಟ್ಟ ಬಾಯ್ದೆರೆದರೂ ಮನೆ ತೊರೆಯದ ಜನ
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಭೂ ವಿಜ್ಞಾನಿ ಮಾರುತಿ, ಪರಿಸರ ತಜ್ಞ ಕೇಶವ ಕೊರ್ಸೆ, ಡಿಎಫ್‌ಒ ಮೋಹನ್ ಕುಮಾರ್, ಅರಣ್ಯಾಧಿಕಾರಿ ಪ್ರೀತಿ ರಾಮದಾಸ ನಾಯ್ಕ, ಛಾಯಾ, ಸೇರಿದಂತೆ ಹಲವರು ಹಾಜರಿದ್ದರು.
ಈ ಪ್ರದೇಶಗಳಲ್ಲಿ ಬೆಟ್ಟ ಕುಸಿಯು ತ್ತಿರುವ ವಿಷಮ ಸ್ಥಿತಿ ಕುರಿತು ‘ಪ್ರಜಾವಾಣಿ’ ಆ.18ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.