ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ

ದಾನಿಗಳ ಸಹಕಾರ, ಸುಶ್ರುತ ಸೊಸೈಟಿಯ ಮಾದರಿ ನಡೆ
Last Updated 7 ಆಗಸ್ಟ್ 2022, 6:30 IST
ಅಕ್ಷರ ಗಾತ್ರ

ಆನವಟ್ಟಿ: ಸಮೀಪದ ಚಿಕ್ಕ ಇಡಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ನೆರವು ನೀಡಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಮುದಾಯದ ಸಹಭಾಗಿತ್ವದ ಪಾಠ ಹೇಳಿದ್ದಾರೆ.

ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೂ 70ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಾನಿಗಳು ಹೈಟೆಕ್‌ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.

ಸುಶ್ರುತ ಸೊಸೈಟಿಯು 3 ಲಕ್ಷ ವೆಚ್ಚದಲ್ಲಿ ಎರಡು ಹೈಟೆಕ್‌ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಶಾಲೆಯ ವಿದ್ಯಾರ್ಥಿನಿಯರು,ಶಿಕ್ಷಕರು ಶೌಚಾಲಯ ಇಲ್ಲದೆ ನಿತ್ಯ ಕಿರಿಕಿರಿ ಅನುಭವಿಸುವಂತಾಗಿತ್ತು.
ಈ ಸಮಸ್ಯೆ ಅರಿತ ಸಿಆರ್‌ಪಿ ರಾಜು ಹಾಗೂ ಮುಖ್ಯಶಿಕ್ಷಕ ಕೃಷ್ಣಪ್ಪ, ಸಹ ಶಿಕ್ಷಕರಾದ ಬಸವಣ್ಯಪ್ಪ, ಮಂಜಪ್ಪ, ಅರ್ಪಣಾ, ಶಿವಕುಮಾರ್ ಮತ್ತು ಎಸ್‌ಡಿಎಂಸಿ ಸದಸ್ಯರು ಸೇರಿ, ಸುಶ್ರುತ ಸೊಸೈಟಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದರು. ಮನವಿಗೆ ಸ್ಪಂದಿಸಿದ ಸೊಸೈಟಿಯವರು ಎರಡು ಹೈಟೆಕ್ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.

ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿಕೊಟ್ಟಿರುವುದಲ್ಲದೇ ಕಾಯಿಲೆಗಳ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಮಾಚೇನಹಳ್ಳಿಯ ಸುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟ್‌ ಸೊಸೈಟಿ ಗ್ರಾಮೀಣ ಭಾಗದಶಾಲೆಗಳಿಗೆ ಶೌಚಾಲಯ ನಿರ್ಮಿಸುವ ಗುರಿ ಹೊಂದಿದೆ.

ಮಕ್ಕಳು ಶಾಲೆಯಲ್ಲಿ ಶೌಚಾಲಯ ಬಳಸುವುದರಿಂದ ಮನೆಯಲ್ಲಿ ಪೋಷಕರಿಗೆ ಶೌಚಾಲಯ ನಿರ್ಮಿಸಲು ಒತ್ತಾಯಿಸುತ್ತಾರೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ಸೊಸೈಟಿಯ
ಡಾ. ಪ್ರಶಾಂತ ಹಾಗೂ ಡಾ. ವಾಣಿ.

ಎರಡು ಶೌಚಾಲಯದಲ್ಲಿ ನಾಲ್ಕು ಯೂರಿನ್ ಘಟಕಗಳು ಇರುವಂತೆ ಕಟ್ಟಡ ನಿರ್ಮಿಸಿರುವುದುವಿಶೇಷ. ಶಾಲೆಗೆ ಹಲವು ದಾನಿಗಳು ಕಿರು ಶುದ್ಧ ನೀರಿನ ಘಟಕ,ಶಾಲೆಗೆ ಬಣ್ಣ ಹಾಗೂ ಗೋಡೆಗಳ ಮೇಲೆ
ಚಿತ್ತಾರ ಸೇರಿ ಅನೇಕ ವಸ್ತುಗಳನ್ನು ಕೊಡುಗೆ ನೀಡಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕ ಎಚ್.ವಿ. ಕೃಷ್ಣಪ್ಪ.

ಸೊಸೈಟಿಯ ಅಧ್ಯಕ್ಷ ಡಾ. ಪ್ರಶಾಂತ, ನಿರ್ದೇಶಕಿ ಡಾ. ವಾಣಿ ಅವರು, ಬಿಇಒ ಮನೋಹರ್, ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್, ಸಿಆರ್‌ಪಿ ರಾಜುಅವರ ಸಮ್ಮುಖದಲ್ಲಿ ಈಚೆಗೆ ಶೌಚಾಲಯವನ್ನು ಶಾಲೆಗೆ ಹಸ್ತಾಂತರಿಸಿದರು.

‘ಸುಶ್ರುತ ಸೊಸೈಟಿ ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಶೌಚಾಲಯ ನಿರ್ಮಿಸುವ ಉದ್ದೇಶ ಹೊಂದಿದೆ.
ಶಾಲೆಯಲ್ಲಿ ಸ್ವಚ್ಛತೆ ಇದ್ದರೆ ಉತ್ತಮ ಆರೋಗ್ಯ ಸಿಗುತ್ತದೆ ಎಂಬುದನ್ನು ಮನಗಂಡು ಈನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎನ್ನುತ್ತಾರೆಬಿಇಒ ಮನೋಹರ್.

ಸರ್ಕಾರದ ಜೊತೆಗೆ ದಾನಿಗಳು ಕೈಜೋಡಿಸುವುದರಿಂದ, ಸರ್ಕಾರಿ ಶಾಲೆಗಳನ್ನು ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯ.

-ಎಚ್.ವಿ. ಕೃಷ್ಣಪ್ಪ, ಮುಖ್ಯಶಿಕ್ಷಕ

ಸ್ವಚ್ಛತೆಯೇ ಭಾಗ್ಯ ಎಂಬ ನಿಟ್ಟಿನಲ್ಲಿ ಸುಶ್ರುತ ಸೊಸೈಟಿ ಕೆಲಸ ಮಾಡುತ್ತಿದೆ. ಇನ್ನೂ ಕೆಲವು ಗ್ರಾಮೀಣ ಭಾಗದ ಶಾಲೆಗಳಿಗೆ ಶೌಚಾಲಯ ನಿರ್ಮಿಸುವಂತೆ ಕೇಳಿಕೊಂಡಿದ್ದೇವೆ.

-ಮನೋಹರ್, ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT