ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ಸಡಗರ

Published : 21 ಸೆಪ್ಟೆಂಬರ್ 2024, 15:38 IST
Last Updated : 21 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಹೊಸನಗರ: ಪಟ್ಟಣದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಶನಿವಾರ ಸಂಭ್ರಮದಿಂದ ನಡೆಯಿತು.

ಇಲ್ಲಿನ ಪೋಸ್ಟ್‌ ಆಫೀಸ್‌ ಪಕ್ಕದ ವೀರ ಸಾವರ್ಕರ್ ಮಂಟಪದಿಂದ ಹೊರಟ ವಿಸರ್ಜನಾ ಪೂರ್ವ ಮೆರವಣಿಗೆ ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿತು.

ಶೋಭಾಯಾತ್ರೆಯಲ್ಲಿ ವಿವಿಧೆಡೆಯ ಕಲಾತಂಡಗಳು ಭಾಗವಹಿಸಿದ್ದವು. ನಾಸಿಕ್ ಡೋಲು, ತಟ್ಟಿರಾಯ ಕುಣಿತ, ಜಾನಪದ ಕುಣಿತ ಅಲ್ಲದೆ ಸಾಂಸ್ಕೃತಿಕ ಹಾಡು ಕುಣಿತಗಳು ಪ್ರೇಕ್ಷಕರನ್ನು ರಂಜಿಸಿದವು.

ಸುತ್ತಲಿನ ಹಳ್ಳಿಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 

ಮಹಾಸಭಾದ ಅಧ್ಯಕ್ಷ ಪ್ರಶಾಂತ್, ಸಂಚಾಲಕ ಎಂ.ಎನ್. ರಾಜು, ಸಹ ಸಂಚಾಲಕ ಸಂತೋಷ್ ನಂದಿ, ಗೌರವ ಸಂಚಾಲಕ ರಾಧಾಕೃಷ್ಣ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಎಂ.ಎನ್. ಸುಧಾಕರ್, ಗಣಪತಿ ಬೆಳಗೋಡು. ಎನ್.ಆರ್.ದೇವಾನಂದ್, ಬಿ.ಎಸ್. ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT