ಗುರುವಾರ , ಮಾರ್ಚ್ 23, 2023
30 °C
ಪ್ರವಾಸಿಗರ ಚಿತ್ತ ಜೋಗ ಜಲಪಾತದತ್ತ

ಬಿಸಿಲು ಮಳೆಯಲ್ಲಿ ಇಮ್ಮಡಿಗೊಂಡ ಜಲಸಿರಿಯ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಕೊರೊನಾ ಕಾಲಘಟ್ಟದ 2ನೇ ಅಲೆಯ ಲಾಕ್‍ಡೌನ್ ಕೊನೆಗೊಂಡ ಬಳಿಕ ಪ್ರವಾಸಿಗರ ಚಿತ್ತ ಜೋಗ ಜಲಪಾತದತ್ತ ಸಾಗಿದೆ.

ಪ್ರತಿದಿನ ಸಾಧಾರಣ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದು, ಮುಂಗಾರು ಮಳೆಯ ವಿರಾಮದ ನಡುವೆ ಬಿಸಿಲು–ಮಳೆಯ ಸಿಂಚನದಿಂದ ಕಂಗೊಳಿಸುತ್ತಿರುವ ಜಲಸಿರಿಯ ವೈಭವವನ್ನು ಕಂಡು ಸಂತಸ ಪಡುತ್ತಿದ್ದಾರೆ.

ಗಾಂಭೀರ್ಯದಿಂದ ಧುಮ್ಮಿಕ್ಕುತ್ತಿರುವ ‘ರಾಜಾ’, ಘರ್ಜಿಸುತ್ತಿರುವ ‘ರೋರರ್’, ಚಿಮ್ಮುತ್ತಿರುವ ‘ರಾಕೆಟ್’, ವಯ್ಯಾರದಿಂದ ಬಂಡೆಗಳ ಮೇಲೆ ನುಣುಪಾಗಿ ಜಾರುತ್ತಿರುವ ‘ರಾಣಿ’ಯ ಶ್ವೇತವರ್ಣ ಮನಸೂರೆಗೊಳ್ಳುತ್ತಿದೆ. ಜಲಸಿಂಚನದೊಂದಿಗೆ ಬೆರೆಯುತ್ತಿರುವ ಸೂರ್ಯ ರಶ್ಮಿಗಳು ಮೂಡಿಸುವ ಕಾಮನಬಿಲ್ಲಿನ ವಿಸ್ಮಯವನ್ನು ಪ್ರವಾಸಿಗರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

‘ಜುಲೈ 5ರವರೆಗೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತದ ಮುಂದಿನ ಆದೇಶದಂತೆ ವೀಕ್ಷಣಾ ಸಮಯವನ್ನು ನಿಗದಿಗೊಳಿಸಲಾಗುವುದು’ ಎಂದು ಪ್ರವಾಸೋದ್ಯಮ ಉಪನಿರ್ದೇಶಕ ರಾಮಕೃಷ್ಣಯ್ಯ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.