ಶನಿವಾರ, ಜೂಲೈ 4, 2020
23 °C

ಸಹಾಯಕ್ಕೆ ಕರಾಟೆ ತರಬೇತುದಾರರ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕರಾಟೆ ತರಬೇತುದಾರರಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕರಾಟೆ ಡೋ ಸ್ಪೋರ್ಟ್ಸ್‌ ಅಸೋಸಿಯೇಷನ್ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರ ಎಲ್ಲಾ ಕುಲ ಕಸಬುದಾರರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಹಾಗೆಯೇ, ಕರಾಟೆ ತರಬೇತುದಾರಿಗೂ ನೀಡಬೇಕು. ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕರಾಟೆ ತರಬೇತುದಾರರು ವಿವಿಧ ಶಾಲೆ, ಕಾಲೇಜು ಮತ್ತು ಸಾರ್ವಜನಿಕವಾಗಿ ಕರಾಟೆ ತರಬೇತಿ ನೀಡುತ್ತಾ ಬಂದಿದ್ದಾರೆ. ಕೊರೊನಾ ಸಮಸ್ಯೆಯಿಂದ 3 ತಿಂಗಳಿನಿಂದ ಯಾವುದೇ ಕೆಲಸವಿಲ್ಲ ಎಂದು ಮನವಿ ಮಾಡಿದರು.

ಸಂಘ ಸಂಸ್ಥೆಗಳೂ ನೆರವಿಗೆ ಬಂದಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿವೆ. ಹಾಗಾಗಿ, ಆರ್ಥಿಕ ನೆರವು ನೀಡಬೇಕು ಎಂದು ಕೋರಿದರು.

ಸಂಘದ ಮುಖಂಡರಾದ ಎಂ.ಪಟೇಲ್, ಚಂದ್ರಕಾಂತ್ ಜಿ.ಭಟ್, ಜಿ.ಕೆ.ರಾಘವೇಂದ್ರ, ಕೆ.ವಿ.ಲಕ್ಷ್ಮಣ ಚಾರ್, ಹರೀಶ್‌ಕುಮಾರ್, ಅಲೋಕ್ ಮನವಿ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು