ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮರಾಜ ದಂಡಾವತಿ ಸೇರಿ 11 ಬರಹಗಾರರಿಗೆ ಪುಸ್ತಕ ಬಹುಮಾನ

Last Updated 4 ನವೆಂಬರ್ 2021, 7:18 IST
ಅಕ್ಷರ ಗಾತ್ರ

ಶಿವಮೊಗ್ಗ: ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿ ರಾಜ್ಯದ 11 ಬರಹಗಾರರಿಗೆ ಕರ್ನಾಟಕ ಸಂಘದ 2020ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಲಾಗಿದೆ.

ದವನ ಸೊರಬ ಅವರ ಅವರ ‘ಪರವಶ’ ಕಾದಂಬರಿಗೆ ಕುವೆಂಪು ಪುಸ್ತಕ ಬಹುಮಾನ, ಪದ್ಮರಾಜ ದಂಡಾವತಿ ಅವರ ಅನುವಾದಿತ ಕೃತಿ ‘ಸೀತಾ ರಾಮಾಯಣದ ಸಚಿತ್ರ ಕಥನ’ಕ್ಕೆ ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ, ಶ್ರೀದೇವಿ ಕೆರೆಮನೆ ಅವರ ‘ಅಂಗೈಯೊಳಗಿನ ಬೆಳಕು’ ಮಹಿಳಾ ಸಾಹಿತ್ಯ ಕೃತಿಗೆ ಎಂ.ಕೆ. ಇಂದಿರಾ ಹಾಗೂ ಎ.ಎಸ್‌.ಮಕಾನದಾರ ಅವರ ‘ಪ್ಯಾರಿ’ ಪದ್ಯಕ್ಕೆ ಪಿ.ಲಂಕೇಶ್‍ಬಹುಮಾನ ದೊರೆತಿದೆ.

ಡಾ.ಬಿ.ಆರ್.ಶ್ರುತಿ ಅವರ ‘ಜೀರೋ ಬ್ಯಾಲೆನ್ಸ್‌’ ಕವನ ಸಂಕಲನಕ್ಕೆ ಡಾ.ಜಿ.ಎಸ್. ಶಿವರುದ್ರಪ್ಪ; ಆಶಾ ಜಗದೀಶ್ ಅವರ ‘ನಾದಾನುಸಂಧಾನ’ ಅಂಕಣ ಬರಹಕ್ಕೆ ಹಾ.ಮಾ. ನಾಯಕ; ಶಾಂತಿ ಕೆ.ಅಪ್ಪಣ್ಣ ಅವರ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಸಣ್ಣ ಕಥಾ ಸಂಕಲನಕ್ಕೆ ಡಾ.ಯು.ಆರ್. ಅನಂತಮೂರ್ತಿ; ಟಿ.ಎಸ್‌.ಮಂಗಳಾ ಅವರ ‘ಆರೋಹಿ’ ನಾಟಕಕ್ಕೆಡಾ.ಕೆ.ವಿ. ಸುಬ್ಬಣ್ಣ; ಎಂ. ಜಾನಕಿ ಅವರ ‘ರಷ್ಯಾದಲ್ಲಿ ಏಳು ದಿನಗಳು’ ಪ್ರವಾಸ ಕೃತಿಗೆಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ; ನಡವಳ್ಳಿ ವಸಂತ್‌ ಅವರ ‘ನಮ್ಮೊಳಗಿನ ಭಾವಪ್ರಪಂಚ’ ವಿಜ್ಞಾನ ಕೃತಿಗೆಹಸೂಡಿ ವೆಂಕಟ ಶಾಸ್ತ್ರಿ; ಹ.ಸ. ಬ್ಯಾಕೋಡ ಅವರ ‘ಮುತ್ತುಕೊಟ್ಟ ಮೀನು’ ಮಕ್ಕಳ ಸಾಹಿತ್ಯಕ್ಕೆ ಡಾ.ನಾ. ಡಿಸೋಜ ಬಹುಮಾನ ಲಭಿಸಿವೆ.

ಪ್ರತಿ ಬಹುಮಾನವೂ ತಲಾ ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ ಎಂದು ಸಂಘದ ಕಾರ್ಯ ದರ್ಶಿ ಪ್ರೊ.ಎಂ. ಆಶಾಲತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT