ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಫ್‌ಡಿ ತಡೆ ಕಾರ್ಯಾಚರಣೆ

ವಲಯಾರಣ್ಯಾಧಿಕಾರಿ ಪ್ರೀತಿ ರಾಮದಾಸ್ ನಾಯ್ಕ
Last Updated 22 ಜನವರಿ 2022, 4:59 IST
ಅಕ್ಷರ ಗಾತ್ರ

ಕಾರ್ಗಲ್:ಉಣುಗಿನಲ್ಲಿ ಕೆಎಫ್‌ಡಿ (ಮಂಗನಕಾಯಿಲೆ) ವೈರಾಣು ಪತ್ತೆಯಾದ ಬೆನ್ನಲ್ಲೇ ಅರಳಗೋಡು ಭಾಗದ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸಲಾಗುತ್ತಿದೆ ಎಂದು ವನ್ಯಜೀವಿ ವಲಯಾರಣ್ಯಾಧಿಕಾರಿ ಪ್ರೀತಿ ರಾಮದಾಸ್ ನಾಯ್ಕತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಮಂಗಗಳು ಸತ್ತಿರುವ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೂ ಎಲ್ಲಿಯೂ ಯಾವುದೇ ಮಂಗಗಳು ಸತ್ತ ಬಗ್ಗೆ ವರದಿಯಾಗಿಲ್ಲ.ಅರಣ್ಯದಲ್ಲಿ ಹಾದು ಹೋಗಿರುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಯುಪಟೋರಿಯಂ ಗಿಡಗಳನ್ನು ಕಡಿದು ಉಣುಗು ಸಂತತಿಗಳು ವೃದ್ಧಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ರೈತರು ಮನೆಗಳ ಸುತ್ತಲೂ ಉಣುಗು ನಾಶವಾಗುವಂತೆ ಸುಣ್ಣದ ಪುಡಿಯನ್ನು ಸಿಂಪಡಿಸಲು ಉಚಿತವಾಗಿ ಇಲಾಖೆಯಿಂದ ಪೂರೈಕೆಮಾಡಲಾಗುತ್ತಿದೆ. ಗ್ರಾಮ ಅರಣ್ಯ
ಸಮಿತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆಯಿಂದ ಅರಳಗೋಡು ಗ್ರಾಮ ಪಂಚಾಯಿತಿಯ ಎಲ್ಲ ಮಜಿರೆ ಗ್ರಾಮಗಳಲ್ಲಿ ಡಿಎಂಪಿ ತೈಲವನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರಿಂದ ಡಿಎಂಪಿ ತೈಲ ಪಡೆದು ಗ್ರಾಮಸ್ಥರು, ರೈತರು, ಕಾರ್ಮಿಕರು ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT