ಬುಧವಾರ, ಜೂಲೈ 8, 2020
28 °C
ಅಪಘಾತದ ನಂತರದಲ್ಲಿ ಕಾರಿನಲ್ಲಿಯೇ ಇದ್ದ ಆಭರಣದ ಬ್ಯಾಗ್‌

ಲಕ್ಷಾಂತರ ಮೌಲ್ಯದ ಆಭರಣ ಹಿಂದಿರುಗಿಸಿದ ಕುಂಸಿ ಪಿಎಸ್‌ಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂಸಿ (ಶಿವಮೊಗ್ಗ): ಇಲ್ಲಿನ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನವೀನ್ ಕುಮಾರ್ ಮಠಪತಿ ತಮಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಲಾರಿ– ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಕಡೂರು ನಿವಾಸಿ, ಕೆಇಬಿ ನೌಕರ ಸುಬ್ಬಯ್ಯ, ಪತ್ನಿ ಭಾರತಿ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಹಿಳೆ ಮೃತಪಟ್ಟಿದ್ದರು. 

ನವೀನ್ ಕುಮಾರ್ ಆಯನೂರಿಗೆ ತೆರಳುವ ಮಾರ್ಗದಲ್ಲಿ ಅಪಘಾತಗೊಂಡಿದ್ದ ಕಾರನ್ನು ಪರಿಶೀಲಿಸಿದ್ದರು. ಆಗ  ಬ್ಯಾಗ್ ಕಂಡುಬಂದಿದ್ದು, ಠಾಣೆಗೆ ಒಯ್ದು ಪರಿಶೀಲಿಸಿದಾಗ ಆಭರಣಗಳಿದ್ದುದು ಕಂಡುಬಂತು.

ಸುಬ್ಬಯ್ಯ ಅವರು ಆಭರಣ ನಾಪತ್ತೆಯಾದ ಬಗ್ಗೆ ದೂರು ನೀಡಿರಲಿಲ್ಲ. ನವೀನ್ ಕುಮಾರ್ ಅವರು ಸುಬ್ಬಯ್ಯ ಅವರಿಗೆ ಕರೆ ಮಾಡಿ ಠಾಣೆಗೆ ಕರೆಯಿಸಿ ಆಭರಣಗಳನ್ನು ನೀಡಿದರು. ಇವುಗಳ ಮೌಲ್ಯ ಅಂದಾಜು ₹ 15 ಲಕ್ಷ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು