ನಾನು ಮೂರ್ನಾಲ್ಕು ಬಾರಿ ಕುಂಚಿಕಲ್‌ಗೆ ಭೇಟಿ ನೀಡಿದ್ದೇನೆ. ಕಾಡದಾರಿಯಲ್ಲಿ ಕ್ರಮಿಸುವುದು ಸವಾಲಿನ ಕೆಲಸ. ಇಂದಿನ ತಲೆಮಾರಿನ ಜನರಿಗೆ ಅಷ್ಟು ಅರಿವಿಲ್ಲ. ವಾರಾಹಿ ಯೋಜನೆಯಿಂದಾಗಿ ನಿರ್ಬಂಧಿತ ಪ್ರದೇಶವಾಗಿರುವುದು ಕೂಡ ಇದಕ್ಕೆ ಕಾರಣ.
ಅನಂತಮೂರ್ತಿ ಶೆಣೈ, ಸ್ಥಳೀಯ ನಿವಾಸಿ
ದೇಶದ ಅತಿ ದೊಡ್ಡ ಜಲಪಾತ ಜಿಲ್ಲೆಯಲ್ಲಿ ಇರುವುದು ಹೆಮ್ಮೆ. ಅಲ್ಲಿಯ ಪ್ರಕೃತಿಯನ್ನು ಕಾಪಾಡಿಕೊಂಡು ವೀಕ್ಷಣೆಗೆ ಅವಕಾಶ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಒಟ್ಟಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ.