ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಸಿ: ಸಿಡಿಲು ಬಡಿದು 18 ಕುರಿ ಸಾವು

Published 12 ಏಪ್ರಿಲ್ 2024, 15:18 IST
Last Updated 12 ಏಪ್ರಿಲ್ 2024, 15:18 IST
ಅಕ್ಷರ ಗಾತ್ರ

ಕುಂಸಿ: ಸಿಡಿಲು ಬಡಿದು 18 ಕುರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಆಯನೂರು ಕೋಟೆಯಲ್ಲಿ ಶುಕ್ರವಾರ ನಡೆದಿದೆ.

ಸಂಜೆ ಸಾಧಾರಣ ಮಳೆಯಾಗುತ್ತಿತ್ತು. ನಂತರ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ.

ಮಾಲೀಕ ಝಾಕಿರ್ ಹುಸೇನ್ ಅವರು ಕುರಿಗಳನ್ನು ಮೇಯಿಸಲು ಮಕ್ಕಳೊಂದಿಗೆ ಆಯನೂರು ಕೋಟೆ ಪಕ್ಕದ ಬಯಲಿಗೆ ಹೊಡೆದುಕೊಂಡು ಹೋಗಿದ್ದರು‌. ಸಾಧಾರಣ ಮಳೆಯ ನಂತರ ಆಕಸ್ಮಿಕವಾಗಿ ಬಡಿದ ಸಿಡಿಲಿಗೆ ಹದಿನೆಂಟು ಕುರಿಗಳು ಬಲಿಯಾಗಿವೆ.

ಝಾಕಿರ್ ಅವರ ಕುಟುಂಬ ಕುರಿ ಮಾರಾಟದಿಂದಲೇ ಜೀವನ ನಡೆಸುತ್ತಿತ್ತು. ಪಶುಸಂಗೋಪನಾ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಗ್ರಾಮದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT