ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿ.ವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಪ್ರತೀ ಭಾಷೆಯು ಒಂದು ಅಸ್ಮಿತೆ, ಜ್ಞಾನಭಂಡಾರ ಹೊಂದಿರುತ್ತದೆ. ಕನ್ನಡ ಭಾಷೆಯಲ್ಲಿ ಜ್ಞಾನಲೋಕವೊಂದು ನಿರ್ಮಾಣವಾಗಲು ಕಾರಣವಾದದ್ದು 12ನೇ ಶತನಮಾನದ ಲಿಂಗಾಯತ ಚಳವಳಿ. ಅದರ ಮೂಲಕ ಕನ್ನಡದಲ್ಲಿ ವಿಶ್ವಜ್ಞಾನ, ಆಲೋಚನೆಗಳು, ತತ್ವ, ಸಾಮುದಾಯಿಕ ಬದುಕು, ಸಾಹಿತ್ಯಗಳು ಸೃಷ್ಟಿಯಾಗಿವೆ ಎಂದು ನುಡಿದರು.