ಇಂದಿನಿಂದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಕವಿಶೈಲದಲ್ಲಿ ಅಕ್ಟೋಬರ್ 4 ಮತ್ತು 5 ರಂದು ಬೆಳಿಗ್ಗೆ 10 ಗಂಟೆಗೆ ‘ಚಿಂತನಾ ಶಿಬಿರ’ ಆಯೋಜಿಸಲಾಗಿದೆ ಎಂದು ಎಸ್.ಆರ್. ಹಿರೇಮಠ ತಿಳಿಸಿದರು. ಬಳ್ಳಾರಿ ವಿಜಯನಗರ ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಬಾಧಿತ ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನದ ವಿಸ್ತೃತ ಜನಾಂದೋಲನದ ಭಾಗವಾಗಿ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.