ಸಾಗರ: ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆ ಹಾಗೂ ಸ್ಪಂದನ ರಂಗ ತಂಡವು ಆ. 12ರಂದು ಸಂಜೆ 5ಕ್ಕೆ ಎಸ್.ಎನ್.ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಲೇಖಕ ರಹಮತ್ ತರೀಕೆರೆ ಅವರ ‘ಕುಲುಮೆ’ ಕೃತಿ ಕುರಿತು ಉಪನ್ಯಾಸ ಹಾಗೂ ಸಂವಾದವನ್ನು ಏರ್ಪಡಿಸಿದೆ.
ಪರಸ್ಪರ ಸಾಹಿತ್ಯ ವೇದಿಕೆಯ ಹೊಸ ಓದು ಮಾಲಿಕೆಯ 15ನೇ ಸರಣಿ ಕಾರ್ಯಕ್ರಮ ಇದಾಗಿದ್ದು, ಲೇಖಕ ಕಲೀಮ್ ಉಲ್ಲಾ ಉಪನ್ಯಾಸ ನೀಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಎಚ್.ಟಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವೇದಿಕೆಯ ಸರ್ಫ್ರಾಜ್ ಚಂದ್ರಗುತ್ತಿ ತಿಳಿಸಿದ್ದಾರೆ.