ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ರಾಘವೇಂದ್ರಗೆ ಸೋಲಿನ ಭೀತಿ: ವೈ.ಎಚ್. ನಾಗರಾಜ್ ಟೀಕೆ

Published 7 ಮಾರ್ಚ್ 2024, 15:15 IST
Last Updated 7 ಮಾರ್ಚ್ 2024, 15:15 IST
ಅಕ್ಷರ ಗಾತ್ರ

ಶಿವಮೊಗ್ಗ: ಸೋಲಿನ ಭೀತಿ ಎದುರಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಚುನಾವಣಾ ಕಲ್ಯಾಣಕ್ಕಾಗಿ ನಿಸರ್ಗ ವಿರೋಧಿ ಹೇಳಿಕೆ, ಭಗವಂತ ಮೆಚ್ಚದ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಟೀಕಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಪ್ಪಿ ತಪ್ಪಿ ಜನ್ಮ ತಾಳಿದ ಶಿಶು ಎಂದು ಹೇಳುವ ಮೂಲಕ ತಾವು ಅಪ್ಪಿ ತಪ್ಪಿ ಸಂಸದನಾದೆ ಎನ್ನುವುದನ್ನು ಮರೆತಿದ್ದಾರೆ. ವರ್ತಮಾನದಲ್ಲಿ ನಿಂತು ಭವಿಷ್ಯದ ಬಗ್ಗೆ ಮಾತನಾಡುವ ರಾಘವೇಂದ್ರ ಅವರು ಭೂತ ಕಾಲ ಮರೆತಂತೆ ಇದೆ ಎಂದು ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪನವರು ಒಂದು ಆಣೆ ಮಾಡಿ ಪುತ್ರನನ್ನು ಚುನಾವಣೆಗೆ ನಿಲ್ಲಿಸಲ್ಲ ಎಂದಿದ್ದರು. ಹೀಗೆ ಅಪ್ಪಿ ತಪ್ಪಿ ಸಂಸದರಾಗಿರುವ ರಾಘವೇಂದ್ರ ಸರ್ಕಾರ ಟೀಕಿಸುವ ಭರದಲ್ಲಿ ನಿಸರ್ಗ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT